Thursday, December 19, 2024

ವೃದ್ಧರಿಗೆ ಬೆಡ್​​ಶಿಟ್​, ಟವಲ್​ ವಿತರಣೆ

ದಾವಣಗೆರೆ : ಕುಟುಂಬದಿಂದ ದೂರವಾಗಿ ವೃದ್ಧಾಶ್ರಮ ಸೇರಿರುವ ವೃದ್ಧರಿಗೆ ದಾವಣಗೆರೆ ಜೆಡಿಎಸ್ ಮುಖಂಡರು ಬೆಡ್ ಶೀಟ್ ಹಾಗೂ ಟವಲ್ ವಿತರಿಸಿ ಮಾನವೀಯತೆ‌ ಮೆರೆದರು.

ತುರ್ಚಘಟ್ಟ ಬಳಿಯ ಸಾಧನಾ ವೃದ್ಧಾಶ್ರಮದ 50 ವೃದ್ಧರಿಗೆ ಜೆಡಿಎಸ್ ಮುಖಂಡರಾದ ಶ್ರೀಧರ್ ಪಾಟೀಲ್, ನಾಗೇಶ್ವರರಾವ್, ಗುಡ್ಧಪ್ಪ, ಶೋಷಿತ ಸಮುದಾಯಗಳ ಒಕ್ಕೂಟದ ಅಧ್ಯಕ್ಷ ಬಾಡದ ಆನಂದರಾಜ್ ಬೇಡ್ ಶೀಟ್ ವಿತರಣೆ ಮಾಡಿದರು.

ಕುಟುಂಬ ಸಮಸ್ಯೆಗಳಿಂದ ತಂದೆ ತಾಯಿಗಳನ್ನ ಮಕ್ಕಳು ದೂರವಿಡುವುದು ನಿಜಕ್ಕೂ ನೋವಿನ ಸಂಗತಿ. ಇಂತಹ ಪರಿಸ್ಥಿತಿ ಯಾರಿಗೂ ಬರಬಾರದೆಂದು ಶ್ರೀಧರ್ ಪಾಟೀಲ್ ತಿಳಿಸಿದರು.

ಇತ್ತೀಚಿನ ದಿನಗಳಲ್ಲಿ ಮಕ್ಕಳು ತಂದೆ ತಾಯಿಯನ್ನ ಮನೆಯಿಂದ ಹೊರ ಹಾಕುವ ಸನ್ನಿವೇಶಗಳು ಹೆಚ್ಚಾಗುತ್ತಿವೆ. ಇದರಿಂದ ವಯೋ ವೃದ್ಧರು ವೃದ್ಧಾಶ್ರಮಗಳಲ್ಲಿ ಕೊನೆಗಾಲದ ದಿನಗಳನ್ನ ಕಳೆಯುವಂತಾಗಿದೆ. ಸಾಧನಾ ವೃದ್ಧಾಶ್ರಮದಲ್ಲಿ ಸುಮಾರು 50 ಮಂದಿಗೆ ಆಶ್ರಯ ಕಲ್ಪಿಸಲಾಗಿದೆ. ಸರ್ಕಾರದಿಂದ ಯಾವುದೇ ಸೌಲಭ್ಯವಿಲ್ಲದೆ ದಾನಿಗಳು ಸಮಾಜ ಸೇವಕರಿಂದ ನೆರವು ಪಡೆದು ವೃದ್ದಾಶ್ರಮ ನಡೆಸಲಾಗುತ್ತಿದೆ ಎಂದು ನಾಗೇಶ್ವರರಾವ್ ತಿಳಿಸಿದರು.

RELATED ARTICLES

Related Articles

TRENDING ARTICLES