Friday, October 18, 2024

ಪಥ ಸಂಚಲನ ನಡೆಸಿದ ಚಾಲಕರು, ಡ್ರಿಲ್ ಮಾಡಿದ ಹೌಸ್‍ಕೀಪಿಂಗ್ ಸಿಬ್ಬಂದಿ

ಬೆಂಗಳೂರು ಗ್ರಾಮಾಂತರ : ಸ್ವಾತಂತ್ರ್ಯ ದಿನವೆಂದರೆ ಪೆರೇಡ್‍ಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ದೇಶಭಕ್ತಿಯನ್ನು ಬಿಂಬಿಸುವಂತಹ ಆಚರಣೆಗಳು ನಮ್ಮ ಕಣ್ಣ ಮುಂದೆ ಬಂದು ನಿಲ್ಲುತ್ತವೆ. ಆದರೆ, ಈ ವರ್ಷ ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆ, ವಿಶ್ವ ವಿದ್ಯಾಪೀಠ ಶಾಲೆಯಲ್ಲಿ ವಿಭಿನ್ನವಾಗಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು. ಶಾಲೆಯಲ್ಲಿ ಎಲೆ ಮರೆ ಕಾಯಿಯಂತೆ ಸಮಾಜದ ಸೇವೆಯನ್ನು ಮಾಡುತ್ತಿರುವವರನ್ನು ಗೌರವಿಸುವ ಮೂಲಕ ವಿನೂತನವಾಗಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿತು. ಶಾಲೆಯನ್ನು ಸುರಕ್ಷಿತ, ಭದ್ರತೆ ಹಾಗೂ ಶುಚಿತ್ವ ವಾತಾವರಣ ನಿರ್ಮಾಣವಾಗುವಂತೆ ಮಾಡುತ್ತಿರುವ ಚಾಲಕರು, ಭದ್ರತಾ ಸಿಬ್ಬಂದಿ, ಸಹಾಯಕ ಸಿಬ್ಬಂದಿ ಮತ್ತು ಹೌಸ್ ಕೀಪಿಂಗ್ ಸಿಬ್ಬಂದಿಯನ್ನು ಸನ್ಮಾನಿಸುವ ಮೂಲಕ ವಿನೂತನವಾಗಿ ಸ್ವಾತಂತ್ರ್ಯ ದಿನವನ್ನು ಆಚರಿಸಲಾಯಿತು. ಜೊತೆಗೆ ವಿಶೇಷವೆಂದರೆ, ಈ ಬಾರಿಯ ಪಥಸಂಚಲನವನ್ನು ನಡೆಸಿಕೊಟ್ಟವರು ಶಾಲಾ ಚಾಲಕರಾದರೆ, ಡ್ರಿಲ್ ಅನ್ನು ನಡೆಸಿಕೊಟ್ಟದ್ದು ಹೌಸ್‍ಕೀಪಿಂಗ್ ಸಿಬ್ಬಂದಿ. ಇನ್ನೂ ಪ್ರತಿ ವರ್ಷ ಶಾಲೆಯ ವಿದ್ಯಾರ್ಥಿಗಳು ಪಥ ಸಂಚಲನ ನಡೆಸಿಕೊಡುತ್ತಿದ್ದರು. ಆದ್ರೆ ಈ ಬಾರಿ ವಿದ್ಯಾರ್ಥಿಗಳಿಗೆ ಏನು ಕಮ್ಮಿ ಇಲ್ಲದಂತೆ ಶಾಲೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಚಾಲಕರು, ಅಡುಗೆ ಕೆಲಸ ಮಾಡುವವರು, ಹೌಸ್ ಕೀಪಿಂಗ್ ಸಿಬ್ಬಂದಿ ಪಥ ಸಂಚಲನ ನಡೆಸಿ ಸೈ ಎನಿಸಿಕೊಂಡಿದ್ದಾರೆ.

RELATED ARTICLES

Related Articles

TRENDING ARTICLES