ಹಾಸನ : ಹಾಸನದಲ್ಲಿ ಜೆಡಿಎಸ್ ನಿಂದ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅರಸೀಕೆರೆ ಶಾಸಕ ಕೆ.ಎಂ. ಶಿವಲಿಂಗೇಗೌಡ, ಕೇಂದ್ರ ಹಾಗು ರಾಜ್ಯ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು. ಕೇಂದ್ರ ಸರ್ಕಾರ ಜನ ವಿರೋಧಿ ಕಾನೂನುಗಳನ್ನ ಜಾರಿ ಮಾಡಿದೆ, ಕೊರೋನಾ ಇಲ್ಲದೆ ಹೋಗಿದ್ರೆ ರಕ್ತ ಪಾತ ಆಗೋಗಲಿ ನಾವು ಬಿಡುತ್ತಿರಲಿಲ್ಲ. ಆದ್ರೆ ಏನ್ಮಾಡೋದು ಕೊರೋನಾದಿಂದ ನೀವು ಬಚಾವಾಗಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ-ಟೆಂಡರ್ ಅಂತೀರಾ, ಇದ್ರಿಂದ ಯಾರಿಗಾದ್ರು ಉಪಯೋಗ ಆಗಿದ್ಯಾ..? ಪ್ರಧಾನಿ ಮೋದಿಯವರೇ ನೀವು ಹೇಳುತ್ತಿರೊ ಯೋಜನೆಗಳಿಂದ ಯಾರಿಗಾದ್ರು ಉಪಯೋಗ ಆಗಿದ್ಯಾ, ಸುಮ್ಮನೇ ಬೋಗಸ್ ಯೋಜನೆ ತಂದು ಜನರನ್ನ ದಿಕ್ಕೆಡಿಸುತ್ತಿದ್ದೀರಾ, ನಿಮಗೆ ಒಳ್ಳೆಯದಾಗಲ್ಲ, ಭೂ ತಾಯಿ ನಿಮ್ಮನ್ನ ಕ್ಷಮಿಸೋದಿಲ್ಲ ಎಂದು ಕಿಡಿಕಾರಿದರು.