Tuesday, January 21, 2025

ಕೋಲಾರದಲ್ಲಿ ಬಿಜೆಪಿ ಕಾರ್ಯಾಲಯಕ್ಕೆ ಅಡಿಗಲ್ಲು

ಕೋಲಾರ : ಕೋಲಾರ ಜಿಲ್ಲಾ ಕೇಂದ್ರದಲ್ಲಿ ಮೂರು ಕೋಟಿ ರುಪಾಯಿ ವೆಚ್ಚದಲ್ಲಿನ ಬಿಜೆಪಿ ಕಾರ್ಯಾಲಯದ ನಿರ್ಮಾಣಕ್ಕೆ ಇಂದು ಭೂಮಿಪೂಜೆಯನ್ನು ನೆರವೇರಿಸಲಾಯ್ತು. ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರ ನಡವಳಿಕೆಯ ವಿರುದ್ದ ಬಿಜೆಪಿ ಮುಖಂಡರು ವಾಗ್ದಾಳಿ ನಡೆಸಿದ್ರು. ಕೋಲಾರ ಜಿಲ್ಲಾ ಕೇಂದ್ರವೆನಿಸಿದ ಕೋಲಾರ ನಗರದ ಹೊರವಲಯದಲ್ಲಿ ಇಂದು ಬಿಜೆಪಿ ಕಾರ್ಯಾಲಯಕ್ಕೆ ಭೂಮಿ ಪೂಜೆಯನ್ನು ನೆರವೇರಿಸಲಾಯ್ತು. ನಗರದ ಕೋಗಿಲಹಳ್ಳಿಯಲ್ಲಿ ತಲೆ ಎತ್ತಲಿರುವ ಮೂರು ಕೋಟಿ ರುಪಾಯಿ ವೆಚ್ಚದ ಬಿಜೆಪಿ ಕಾರ್ಯಾಲಯದ ಅಡಿಗಲ್ಲು ಸಮಾರಂಭಕ್ಕೆ ಬಿಜೆಪಿಯ ಸ್ಥಳೀಯ ಮುಖಂಡರು ಹಾಜರಿದ್ದರು. ಹೋಮ-ಹವನ ಮತ್ತು ವಿಶೇಷ ಪೂಜೆಗಳನ್ನು ಈ ಸಂದರ್ಭದಲ್ಲಿ ನೆರವೇರಿಸಲಾಯ್ತು.
ಕೋಲಾರ ಲೋಕಸಭಾ ಕ್ಷೇತ್ರವನ್ನು ಪ್ರಸ್ತುತ ಬಿಜೆಪಿ ಪ್ರತಿನಿಧಿಸುತ್ತಿದೆ. ಹಾಗೆಯೇ, ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿಯ ಕೆಲವು ಕ್ಷೇತ್ರಗಳಲ್ಲಿಯೂ ಕೂಡಾ ಬಿಜೆಪಿಯ ಪ್ರತಿನಿಧಿಗಳಿದ್ದಾರೆ. ಮುಂದಿನ ದಿನಗಳಲ್ಲಿ ಕೋಲಾರ ಜಿಲ್ಲೆಯಲ್ಲಿ ಬಿಜೆಪಿ ಪಕ್ಷವನ್ನು ಮತ್ತಷ್ಟು ಬಲಿಷ್ಟಗೊಳಿಸುವ ಇರಾದೆಯಿದೆ. ಈ ಹಿನ್ನಲೆಯಲ್ಲಿ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿಯೂ ಬಿಜೆಪಿ ಕಾರ್ಯಾಲಯವನ್ನು ತೆರೆಯಲು ಮುಂದಿನ ದಿನಗಳಲ್ಲಿ ಕ್ರಮ ಜರುಗಿಸುವ ವಿಶ್ವಾಸಬಿಜೆಪಿಯ ಮುಖಂಡರದ್ದಾಗಿದೆ. ಇದೇ ಸಂದರ್ಭದಲ್ಲಿ ಎಂಎಲ್ಸಿ ವೈ.ಎ.ನಾರಾಯಣಸ್ವಾಮಿ ಅವ್ರು ಕಾಂಗ್ರೆಸ್ ಮುಖಂಡರ ವಿರುದ್ದ ವಾಗ್ದಾಳಿ ನಡೆಸಿದ್ರು. ಬೆಂಗಳೂರು ಗಲಭೆಯಲ್ಲಿ ಭಾಗಿಯಾದವ್ರ ಪರವಾಗಿ ಕಾಂಗ್ರೆಸ್ ಮುಖಂಡರು ವಕಾಲತ್ತು ವಹಿಸುವ ಮೂಲಕ ಧರ್ಮದ ತುಷ್ಟೀಕರಣಕ್ಕೆ ಅವಕಾಶ ಮಾಡಿಕೊಡುತ್ತಿದ್ದಾರೆ ಎಂದು ಅವ್ರು ಟೀಕಿಸಿದ್ರು. ಒಟ್ನಲ್ಲಿ, ಕೋಲಾರದಲ್ಲಿ ಬಿಜೆಪಿ ಕಾರ್ಯಾಲಯವನ್ನು ನಿರ್ಮಿಸಲು ಇಂದು ಹಾಕಿರುವ ಬುನಾದಿಯು ಕಾರ್ಯಕರ್ತರಲ್ಲಿ ಮತ್ತಷ್ಟು ಹುರುಪು ತಂದುಕೊಡುತ್ತದೆ ಅನ್ನೋ ವಿಶ್ವಾಸವು ಮುಂದಿನ ದಿನಗಳಲ್ಲಿ ಯಾವ ರೀತಿಯಲ್ಲಿ ವರ್ಕೌಟ್ ಆಗುತ್ತದೆ ಅನ್ನೋದನ್ನು ಕಾದು ನೋಡಬೇಕಾಗಿದೆ.

ಆರ್.ಶ್ರೀನಿವಾಸಮೂರ್ತಿ, ಪವರ್ ಟಿವಿ, ಕೋಲಾರ.

RELATED ARTICLES

Related Articles

TRENDING ARTICLES