ಬೆಂಗಳೂರು : ರಸ್ತೆಬದಿಯಲ್ಲಿ ಚಿರತೆ ಮರಿಯೊಂದು ಸಾವನ್ನಪ್ಪಿರುವ ಘಟನೆ ಬನ್ನೇರುಘಟ್ಟ ಅರಣ್ಯ ವಲಯದ ಜಿಗಣಿ-ಹಾರೋಹಳ್ಳಿ ಮುಖ್ಯ ರಸ್ತೆಯ ಮಹಂತಲಿಂಗಾಪುರ ಬಳಿ ನಡೆದಿದೆ. ಈ ಮೊದಲು ಒಂದು ಹೆಣ್ಣು ಚಿರತೆ ನಾಲ್ಕು ಐದು ತಿಂಗಳ ಎರಡು ಚಿರತೆ ಮರಿಗಳು ಈ ಸಮೀಪದಲ್ಲೆ ಕಾಣಿಸಿಕೊಂಡಿದ್ದವು ಈ ಚಿರತೆ ಮರಿಗಳ ಪೈಕಿ ಒಂದು ಚಿರತೆ ಇದಾಗಿದೆ ಎಂಬ ಶಂಕೆ ವ್ಯಕ್ತವಾಗಿದ್ದು, ದಾರಿ ಪಕ್ಕದಲ್ಲಿಯೇ ಯಾರೋ ದುಷ್ಕರ್ಮಿಗಳು ಬಿಸಾಡಿದಂತ ಹಸುವಿನ ಹಾಗೂ ಕೋಳಿ ತ್ಯಾಜ್ಯವನ್ನು ತಿನ್ನಲು ಬಂದಾಗ ದಾರಿಯಲ್ಲಿ ಹೋಗುವ ಯಾವುದೋ ಅಪರಿಚಿತ ವಾಹನ ಚಿರತೆ ಮರಿಗೆ ಡಿಕ್ಕಿಯಾಗಿ ಚಿರತೆ ಮರಿ ಸ್ಥಳದಲ್ಲಿಯೇ ಸಾವನ್ನಪ್ಪಿದೆ. ಇನ್ನು ಈ ಮರಿಗೆ ನಾಲ್ಕರಿಂದ ಐದು ತಿಂಗಳು ಎಂದು ಅಂದಾಜಿಸಲಾಗಿದ್ದು ಹೆಚ್ಚಿನ ತನಿಕೆ ಕೈಗೊಳ್ಳಲಾಗುತ್ತಿದೆ.