ಮಂಡ್ಯ : ಪ್ರತಿಷ್ಠೆಯ ಕಣವಾಗಿದ್ದ ಮಂಡ್ಯ ಜಿಲ್ಲಾ ಪಂಚಾಯತ್ ಸ್ಥಾಯಿ ಸಮಿತಿ ಚುನಾವಣೆ ಸುಸೂತ್ರವಾಗಿ ಮುಕ್ತಾಯವಾಗಿದೆ. ಅತೀ ಹೆಚ್ಚು ಸ್ಥಾನಗಳನ್ನ ಗೆಲ್ಲುವ ಮೂಲಕ ಜೆಡಿಎಸ್ ಮಂಡ್ಯ ಜಿಪಂನಲ್ಲಿ ಮತ್ತೆ ಮೇಲುಗೈ ಸಾಧಿಸಿದ್ರೆ, ಆಪರೇಷನ್ ಕಮಲಕ್ಕೆ ಕೈ ಹಾಕಿದ್ದ ಬಿಜೆಪಿ ತೀವ್ರ ಮುಖಭಂಗ ಅನುಭವಿಸುವಂತಾಗಿದೆ.
33ರ ಪೈಕಿ 32ರಲ್ಲಿ ಗೆದ್ದ ಜೆಡಿಎಸ್:
ಮಂಡ್ಯ ಜಿಲ್ಲಾ ಪಂಚಾಯತ್ ನ 5 ಸ್ಥಾಯಿ ಸಮಿತಿಗಳ ಒಟ್ಟು 33 ಸ್ಥಾನಗಳಿಗೆ ಇಂದು ಚುನಾವಣೆ ನಿಗಧಿಯಾಗಿತ್ತು. ಒಟ್ಟು 33 ಸ್ಥಾನಗಳಿಗೆ ಜೆಡಿಎಸ್ ನ 33 ಹಾಗೂ ಬಿಜೆಪಿ ಬೆಂಬಲಿತ ಕಾಂಗ್ರೆಸ್, ಪಕ್ಷೇತರ ಸದಸ್ಯರು ಸೇರಿ 33 ಮಂದಿ ನಾಮಪತ್ರ ಸಲ್ಲಿಸಿದ್ದರು. ಅಂತಿಮವಾಗಿ ನಡೆದ ಗೌಪ್ಯ ಮತದಾನದಲ್ಲಿ 32 ಮಂದಿ ಜೆಡಿಎಸ್ ಸದಸ್ಯರು ಭರ್ಜರಿ ಗೆಲುವು ಸಾಧಿಸಿದ್ರೆ, ಬಿಜೆಪಿ ಬೆಂಬಲಿತ ಸದಸ್ಯರೊಬ್ಬರು ಮಾತ್ರ ಗೆಲುವು ಸಾಧಿಸಲಷ್ಟೇ ಸಾಧ್ಯವಾಯಿತು.
ಅಧ್ಯಕ್ಷೆ ಮತ್ತು ಸದಸ್ಯರ ನಡುವಿನ ಪ್ರತಿಷ್ಠೆ ಪಣಕ್ಕೆ:
ಮಂಡ್ಯ ಜಿಪಂ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸ್ಥಾಯಿ ಸಮಿತಿ ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಇಲ್ಲಿವರೆಗೂ ಪ್ರತಿ ಸಲವೂ ನಡೆದ ಸ್ಥಾಯಿ ಸಮಿತಿ ಆಯ್ಕೆ ಅವಿರೋಧವಾಗಿಯೇ ನಡೆಯುತ್ತಿತ್ತು.
ಆಡಳಿತರೂಢ ಪಕ್ಷದ ಅಧ್ಯಕ್ಷೆ ಮತ್ತು ಸದಸ್ಯರ ನಡುವಿನ ಪ್ರತಿಷ್ಠೆಯಿಂದಾಗಿ ಈ ಸಲ ಚುನಾವಣೆ ನಡೆಸಬೇಕಾಗಿ ಬಂತು. ನಾಗರತ್ನ ಸ್ವಾಮಿ ಆಡಳಿತರೂಢ ಜೆಡಿಎಸ್ ಪಕ್ಷದಿಂದ ಚುನಾಯಿತರಾಗಿ, ಅಧ್ಯಕ್ಷೆ ಸ್ಥಾನ ಅಲಂಕರಿಸಿದ್ದರು. ಒಪ್ಪಂದದಂತೆ ಎಲ್ಲವೂ ನಡೆದಿದ್ದರೆ ಅಧ್ಯಕ್ಷೆ ನಾಗರತ್ನ ಸ್ವಾಮಿ ಈಗಾಗಲೇ ತಮ್ಮ ಅಧ್ಯಕ್ಷಗಾದಿಗೆ ರಾಜೀನಾಮೆ ನೀಡಬೇಕಿತ್ತು.
ಆದರೆ, ಇತ್ತೀಚೆಗೆ ನಡೆದ ರಾಜಕೀಯ ಬೆಳವಣಿಗೆಗಳಲ್ಲಿ ಅಧ್ಯಕ್ಷೆ ನಾಗರತ್ನರ ಪತಿ ಎಸ್.ಪಿ ಸ್ವಾಮಿ ಜೆಡಿಎಸ್ ತೊರೆದು ಬಿಜೆಪಿ ಸೇರಿದ್ದಾರೆ.
ಸ್ವಾಮಿ ಬಿಜೆಪಿ ಸೇರಿದಾಗಿಂದಲೂ ನಾಗರತ್ನರ ರಾಜೀನಾಮೆಗೆ ಪಕ್ಷದ ವರಿಷ್ಟರು ಹಾಗೂ ಸದಸ್ಯರು ಪಟ್ಟು ಹಿಡಿದಿದ್ದರೂ, ಪಕ್ಷದ ವರಿಷ್ಟರು ಮತ್ತು ಸದಸ್ಯರಿಗೆ ಬೆಲೆ ಕೊಡದೆ ನಾಗರತ್ನ ಅಧಿಕಾರದಲ್ಲಿ ಮುಂದುವರಿದಿದ್ದರು. ಇದೀಗ ಅಧ್ಯಕ್ಷೆ ವಿರುದ್ಧದ ಸೇಡನ್ನ ಜೆಡಿಎಸ್ ಬಡ್ಡಿ ಸಹಿತ ತೀರಿಸಿಕೊಂಡಂತಿದೆ.
ಆಪರೇಷನ್ ಕಮಲಕ್ಕೆ ಕೈ ಹಾಕಿದ್ದ ಬಿಜೆಪಿಗೆ ಮುಖಭಂಗ.
ಮಂಡ್ಯ ಜಿಪಂ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸ್ಥಾಯಿ ಸಮಿತಿ ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಇಲ್ಲಿವರೆಗೂ ಪ್ರತಿ ಸಲವೂ ನಡೆದ ಸ್ಥಾಯಿ ಸಮಿತಿ ಆಯ್ಕೆ ಅವಿರೋಧವಾಗಿಯೇ ನಡೆಯುತ್ತಿತ್ತು.
ಆಡಳಿತರೂಢ ಪಕ್ಷದ ಅಧ್ಯಕ್ಷೆ ಮತ್ತು ಸದಸ್ಯರ ನಡುವಿನ ಪ್ರತಿಷ್ಠೆಯಿಂದಾಗಿ ಈ ಸಲ ಚುನಾವಣೆ ನಡೆಸಬೇಕಾಗಿ ಬಂತು. ಹೀಗಾಗಿ ಮತದಾನದ ಹಕ್ಕುಳ್ಳ ಜಿಲ್ಲೆಯ ಶಾಸಕರು, ಸಚಿವರು, ಸಂಸದರು ಹಾಗೂ ಪರಿಷತ್ ಸದಸ್ಯರು ಕೂಡ ಇದೇ ಮೊದಲ ಬಾರಿಗೆ ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡು, ಮತ ಚಲಾಯಿಸಿದರು. ಜೆಡಿಎಸ್ ಬಿಟ್ಟು ಬಿಜೆಪಿ ಸೇರಿರುವ ಅಧ್ಯಕ್ಷೆ ಪತಿ ಸ್ವಾಮಿ, ಸಚಿವ ನಾರಾಯಣಗೌಡ, ಸಂಸದೆ ಸುಮಲತಾ ಅಂಬರೀಶ್ ಹಾಗೂ ಕಾಂಗ್ರೆಸ್ ಸದಸ್ಯರ ಬೆಂಬಲ ಪಡೆದು ಆಪರೇಷನ್ ಕಮಲಕ್ಕೆ ಕೈ ಹಾಕಿದ್ದರು.
ಸ್ವಾಮಿ ಅವರ ಅದೃಷ್ಟ ಕೈ ಸರಿ ಇಲ್ಲವೋ ಅಥವಾ ಜೆಡಿಎಸ್ ಲಕ್ ಚೆನ್ನಾಗಿತ್ತೋ ಗೊತ್ತಿಲ್ಲ ಅಂತಿಮವಾಗಿ ಜೆಡಿಎಸ್ ಭರ್ಜರಿ ಗೆಲುವು ಸಾಧಿಸುವ ಮೂಲಕ ಆಪರೇಷನ್ ಕಮಲಕ್ಕೆ ಕೈ ಹಾಕಿದ್ದ ಬಿಜೆಪಿ ಯತ್ನ ವಿಫಲವಾಯಿತು. ಜೆಡಿಎಸ್ ಮಣಿಸಲು ಸಚಿವ, ಸಂಸದೆ, ಅಧ್ಯಕ್ಷೆ, ಕಾಂಗ್ರೆಸ್ ಎಲ್ಲರೂ ಒಂದಾದರೂ ಹೀನಾಯ ಸೋಲಿನ ಮೂಲಕ ಬಿಜೆಪಿ ತೀವ್ರ ಮುಖಭಂಗ ಅನುಭವಿಸುವಂತಾಯ್ತು.
….
ಡಿ.ಶಶಿಕುಮಾರ್, ಮಂಡ್ಯ.