ಕೋಲಾರ: ಜಿಲ್ಲೆಯಲ್ಲಿ ಸಾರ್ವಜನಿಕವಾಗಿ ಗಣೇಶ ಪ್ರತಿಷ್ಠಾಪನೆ, ಉತ್ಸವ ಹಾಗೂ ವಿಸರ್ಜನೆಯನ್ನ ನಿಷೇಧಿಸಲಾಗಿದೆ. ಕೊರೋನಾ ಹಿನ್ನಲೆಯಲ್ಲಿ ಕೋಲಾರ ಜಿಲ್ಲಾಡಳಿತ ನಿಷೇಧಿಸಿ ಆದೇಶ ಹೊರಡಿಸಿದೆ. ಜಿಲ್ಲೆಯಲ್ಲಿ ಕೊರೋನಾ ಸೋಂಕಿತರು ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದ್ದಾರೆ.
ಸಾರ್ವಜನಿಕವಾಗಿ ಗಲ್ಲಿಗಳಲ್ಲಿ ಗಣೇಶ ಪ್ರತಿಷ್ಠಾಪನೆ ಹಾಗೂ ಉತ್ಸವ ಮಾಡುವುದರಿಂದ ಸಾಮಾಜಿಕ ಅಂತರ ಕಾಪಾಡಲು ಸಾಧ್ಯವಾಗುವುದಿಲ್ಲ. ಇದರಿಂದ ಈ ಬಾರಿ ಸಾರ್ವಜನಿಕವಾಗಿ ಗಣೇಶ ಪ್ರತಿಷ್ಠಾಪನೆ, ಉತ್ಸವ ಹಾಗೂ ವಿಸರ್ಜನೆಯನ್ನ ನಿಷೇಧಿಸಲಾಗಿದೆ ಅಂತ ಕೋಲಾರ ಡಿಸಿ ಸತ್ಯಭಾಮ ಹೇಳಿದ್ರು. ಸಾರ್ವಜನಿಕರು ಮನೆಗಳಲ್ಲಿಯೇ ಅರಿಶಿಣ, ಪರಿಸರ ಹಾಗೂ ಆರೋಗ್ಯ ಸ್ನೇಹಿ ಗಣೇಶ ಮೂರ್ತಿಗಳನ್ನ ಮಾಡಿಕೊಂಡು ಪ್ರತಿಷ್ಠಾಪಿಸುವಂತೆಯೂ ಮಾಹಿತಿ ನೀಡಿದರು. ಇನ್ನೂ ಗಣೇಶ ಮೂರ್ತಿಗಳ ವಿತರಕರು ಸಹ ಸಾರ್ವಜನಿಕ ಗಣೇಶ ಮೂರ್ತಿಗಳನ್ನ ಮಾರಾಟ ಮಾಡುವುದನ್ನ ನಿಷೇಧ ಮಾಡಲಾಗಿದೆ ಎಂದರು.
-ಆರ್.ಶ್ರೀನಿವಾಸಮೂರ್ತಿ