ಆ್ಯಡಮ್ ಗಿಲ್ಕ್ರಿಸ್ಟ್ .. ಯಾವೊಬ್ಬ ಅಭಿಮಾನಿಯೂ ಆಸೀಸ್ನ ಈ ಕ್ರಿಕೆಟ್ ದಿಗ್ಗಜನನ್ನು ಮರೆಯಲು ಸಾಧ್ಯವಿಲ್ಲ. ವಿಶ್ವಕ್ರಿಕೆಟ್ ನಲ್ಲಿ ಸಖತ್ ಸದ್ದು ಮಾಡಿದ್ದ ಆ್ಯಡಮ್ ಗ್ರಿಲ್ಕ್ರಿಸ್ಟ್ ನಿವೃತ್ತಿ ಘೋಷಿಸಿದ್ದು ಕೂಡ ದೊಡ್ಡ ಮಟ್ಟಿನ ಸದ್ದು ಮಾಡಿತ್ತು..!
2008ರಲ್ಲಿ ಅಡಿಲೇಡ್ನಲ್ಲಿ ನಡೆದ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 4 ನೇ ಟೆಸ್ಟ್ ಮ್ಯಾಚ್ ಬಳಿಕ ವಿಕೆಟ್ ಕೀಪರ್, ಬ್ಯಾಟ್ಸ್ಮನ್ ಗಿಲ್ಕ್ರಿಸ್ಟ್ ನಿವೃತ್ತಿ ಘೋಷಿಸಿದ್ದರು. ಟೆಸ್ಟ್ ಕ್ರಿಕೆಟಿಗೆ ಅವರ ದಿಢೀರ್ ನಿವೃತ್ತಿ ನಿರ್ಧಾರ ಸ್ವತಃ ನಾಯಕನಿಗೂ ಗೊಂದಲ ಉಂಟುಮಾಡಿತ್ತು! ಆದರೆ, ಸ್ಪಷ್ಟ ಕಾರಣ ತಿಳಿದುಬಂದಿರ್ಲಿಲ್ಲ. ಇದೀಗ ಅದಕ್ಕೆ ಉತ್ತರ ಸಿಕ್ಕಿದೆ. ಭಾರತದ ಮಾಜಿ ಕ್ರಿಕೆಟಿಗ, ಟೆಸ್ಟ್ ಸ್ಪೆಷಲಿಸ್ಟ್ ಆಗಿದ್ದ ವಿ. ವಿ ಎಸ್ ಲಕ್ಷ್ಮಣ್ ಗಿಲ್ ಕ್ರಿಸ್ಟ್ ನಿವೃತ್ತಿ ಘೋಷಿಸಲು ಕಾರಣ ಅಂತ ಗೊತ್ತಾಗಿದೆ!
ಹೌದು, ಈ ಮಾತನ್ನು ಸ್ವತಃ ಆ್ಯಡಮ್ ಗಿಲ್ಕ್ರಿಸ್ಟ್ ಹೇಳಿದ್ದಾರೆ. ಇತ್ತೀಚೆಗೆ ಖಾಸಗಿ ಚಾನಲ್ಲೊಂದರ ಸಂದರ್ಶನದಲ್ಲಿ ಗಿಲ್ಕ್ರಿಸ್ಟ್ ಆ ಸತ್ಯವನ್ನು ರಿವೀಲ್ ಮಾಡಿದ್ದಾರೆ. ಆ ಪಂದ್ಯದಲ್ಲಿ ವಿವಿಎಸ್ ಲಕ್ಷ್ಮಣ್ ನೀಡಿದ್ದ ಕ್ಯಾಚ್ಗಳನ್ನು ಕೈಚೆಲ್ಲಿದ್ದೆ. ಅದೇ ನೆಪ ಹೇಳಿ ಟೆಸ್ಟ್ ಕ್ರಿಕೆಟ್ನಿಂದ ದೂರ ಉಳಿದೆ ಅಂದಿದ್ದಾರೆ.