Monday, January 20, 2025

ಭದ್ರ ಅಭಯಾರಣ್ಯದಲ್ಲಿ ನಟ ದರ್ಶನ್ ತಿರುಗಾಟ

ಚಿಕ್ಕಮಗಳೂರು :ಚಿಕ್ಕಮಗಳೂರು ಜಿಲ್ಲೆಯ ಗಡಿ ಭಾಗದಲ್ಲಿರುವ ಭದ್ರ ಅಭಯಾರಣ್ಯಕ್ಕೆ ನಟ ದರ್ಶನ್ ಭೇಟಿ ನೀಡಿದ್ದಾರೆ. ಭದ್ರಾ ಅಭಯಾರಣ್ಯದಲ್ಲಿ ಎರಡು ದಿನಗಳ ಕಾಲ ದರ್ಶನ್ ಅವರು ಪ್ರವಾಸ ಕೈಕೊಂಡಿದ್ದರು.  ಅರಣ್ಯ ಇಲಾಖೆಯ ರಾಯ ಭಾರಿಯಾಗಿರುವ ನಟ ದರ್ಶನ್ ಅವರು ಭದ್ರಾ ಅಭಯಾರಣ್ಯದಲ್ಲಿ ಸಂಚಾರ ಮಾಡಿ ಇಲ್ಲಿನ ಪ್ರಕೃತಿ ಸೌಂದರ್ಯವನ್ನು ಸವೆದು,ಇಲ್ಲಿನ ಮರ ಗಿಡಗಳ ಮಹತ್ವ ಹಾಗೂ ಅರಣ್ಯದ ಬಗ್ಗೆ ಇರುವ ಕಾಳಜಿಯನ್ನು ತೋರಿಸಿಕೊಟ್ಟಿದ್ದಾರೆ. ಇದೇ ಸಂದರ್ಭದಲ್ಲಿ ಅರಣ್ಯದಲ್ಲಿ ಗಿಡ ನೆಟ್ಟು ಅದಕ್ಕೆ ನೀರು ಎರೆದಿದ್ದಾರೆ. ದರ್ಶನ್ ಜೊತೆ ಹಾಸ್ಯ ನಟ ಚಿಕ್ಕಣ್ಣ ಅವರು  ಸಾಥ್ ನೀಡಿದ್ದು, ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ, ವಲಯ ಅರಣ್ಯ ಅಧಿಕಾರಿ ಸತೀಶ್ ಅವರು ಉಪಸ್ಥಿತರಿದ್ದರು. ವನ್ಯಜೀವಿ ಪರಿಪಾಲಕರಾದ ಗಣೇಶ್ ಬಿ ಎಸ್ ಅವರ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆದಿದ್ದು, ಈ ಸಂದರ್ಭದಲ್ಲಿ ಭದ್ರಾ ಅಭಯಾರಣ್ಯದಲ್ಲಿ ಕಾರ್ಯ ನಿರ್ವಹಿಸುವ ಅರಣ್ಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದು, ನಟ ದರ್ಶನ್ ಅವರ ಅನೇಕ ಸ್ನೇಹಿತರು ಗಿಡ ನೆಡುವುದರ ಮೂಲಕ ಅರಣ್ಯದ ಬಗ್ಗೆ ಜಾಗೃತಿ ಮೂಡಿಸಿದರು…

ಸಚಿನ್ ಶೆಟ್ಟಿ ಚಿಕ್ಕಮಗಳೂರು….

RELATED ARTICLES

Related Articles

TRENDING ARTICLES