ಗದಗ : ಇಂದು ಅಯೋಧ್ಯೆನಲ್ಲಿ ಶ್ರೀರಾಮ ಮಂದಿರ ಶಿಲಾನ್ಯಾಸ ಹಿನ್ನಲೆ, ದೇಶದೆಲ್ಲೆಡೆ ಶ್ರೀರಾಮನ ಜಪ, ತಪ ನಡೆಯುತ್ತಿದೆ. ಅದೇರೀತಿ ಮುಸ್ಲಿಂ ಕಲಾವಿದನೋರ್ವ ಶ್ರೀರಾಮನ ಪಾದ ಹಾಗೂ ಹನುಮನ ಚಿತ್ರ ಬಿಡಿಸುವ ಮೂಲಕ ರಾಮಲಲ್ಲಾನ ಜಪಕ್ಕೆ ಮುಂದಾಗಿರುವ ಘಟನೆ ನಗರದಲ್ಲಿ ನಡೆದಿದೆ. ನಗರದ ಅಮರೇಶ್ವರ ಕಾಲೋನಿಯ ಮುನಾಫ್ ಹರ್ಲಾಪುರ ಎಂಬ ಮುಸ್ಲಿಂ ಹಿರಿಯ ಕಲಾವಿದನೋರ್ವ ಶ್ರೀರಾಮನ ಭಕ್ತನಾಗಿದ್ದು, ಚತುರ್ಭುಜ ಮಂಡಲದಲ್ಲಿ ಶ್ರೀ ರಾಮನ ಪಾದಗಳ ಚಿತ್ರ ಬಿಡಿಸಿ ಅದಕ್ಕೆ ಆಂಜನೇಯ ನಮಸ್ಕರಿಸುವ ರೀತಿನಲ್ಲಿ ಚಿತ್ರಬೀಡಿಸಿ ಭಕ್ತಿಗೆ ಪಾತ್ರರಾಗಿದ್ದಾರೆ. ಪ್ರಧಾನಿ ಮೋದಿ ಅವರು ಅಯೋಧ್ಯೆಯ ಪೂಜೆಯಲ್ಲಿ ಪಾಲ್ಗೊಂಡ ವೇಳೆ, ಇತ್ತ ಮುಸ್ಲಿಂ ಕಲಾವಿದ ತನ್ನ ಮನೆಯಲ್ಲಿ ಈ ತರನಾದ ಚಿತ್ರಗಳನ್ನು ಬಿಡಿಸುವ ಮೂಲಕ ತನ್ನ ಕಲೆಯನ್ನು ಅಭಿವ್ಯಕ್ತಪಡಿಸಿರುವುದು ಹೆಮ್ಮೆಯ ವಿಷಯ. ಮಂಡಲದ ಮಧ್ಯೆ ರಾಮನ ಪಾದಗಳ ಚಿತ್ರ ಬಿಡಿಸಿ, ಸುತ್ತಲು ಜೈಶ್ರೀರಾಮ್ ಎಂದು ಬರೆದುಕೊಳ್ಳುವ ಮೂಲಕ ಸಂಭ್ರಮಿಸಿದ್ದಾರೆ. ಆಯಾ ಹಬ್ಬ ಹರಿದಿನಗಳ ಸಂದರ್ಭದಲ್ಲಿ ಆಯಾ ದೇವರುಗಳ ಚಿತ್ರಗಳನ್ನ ಬಿಡಿಸುವ ಮೂಲಕ ನಾವೆಲ್ಲಾ ಒಂದು ಎಂಬ ಸಂದೇಶ ಸಾರುತ್ತಾ ಬರುತ್ತಿದ್ದಾರಂತೆ. ಇಂದು ಸಹ ಜಾತಿ, ಮತ, ಬೇಧ, ಭಾವ ತೊರೆದು ನಾವೆಲ್ಲರೂ ಒಂದಾಗಿ ಬಾಳಬೇಕು ಎಂಬ ಸಂದೇಶ ಹಿರಿಯ ಕಲಾವಿದ ಮುನಾಫ್ ಅವರದ್ದಾಗಿದೆ.