ದೇವನಹಳ್ಳಿ : ಕೋವಿಡ್ ಸೋಂಕಿತ ಮೃತಪಟ್ಟು ಮೂರು ದಿನ ಕಳೆದರೂ ಮನೆಯವರಿಗೆ ಮಾಹಿತಿ ನೀಡಿಲ್ಲ ಅಂತ ಮೃತನ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಆಕಾಶ್ ಆಸ್ಪತ್ರೆಯಲ್ಲಿ ನಡೆದಿದೆ. ಅಂದಹಾಗೆ ಬೆಂಗಳೂರು ನಗರ ಕೆ ಪಿ ಆಗ್ರಹಾರದ 56 ವರ್ಷದ ವ್ಯಕ್ತಿಯೊಬ್ಬರು ಕೋವಿಡ್-19 ಗೆ ಗುರಿಯಾಗಿ ಜುಲೈ 30 ರ ಸಂಜೆ ಗುರುವಾರದಂದು ದೇವನಹಳ್ಳಿಯ ಆಕಾಶ್ ಆಸ್ಪತ್ರೆಗೆ ಶಿಫ್ಟ್ ಮಾಡಿದ್ದರು. ಆದ್ರೆ ಶುಕ್ರವಾರ ಬೆಳಿಗಿನ ಜಾವ ಸೋಂಕಿತ ವ್ಯಕ್ತಿ ಮೃತಪಟ್ಟಿದ್ದಾರೆ. ಆದ್ರೆ ಈ ಮಾಹಿತಿಯನ್ನು ಆಸ್ಪತ್ರೆಯವರು ಸಂಬಂಧಿಕರಿಗೆ ನೀಡಿಲ್ಲವಂತೆ. ಆಗಸ್ಟ್ 02 ರಂದು ಭಾನುವಾರ ಸೋಂಕಿತ ವ್ಯಕ್ತಿ ಯನ್ನ ನೋಡಿಕೊಂಡು ಹೋಗುವ ಸಲುವಾಗಿ ಆಸ್ಪತ್ರೆ ಬಳಿ ಸಂಬಂಧಿಕರು ಬಂದಾಗ ಸೋಂಕಿತ ವ್ಯಕ್ತಿ ಸಾವನ್ನಪ್ಪಿರುವ ಮಾಹಿತಿ ಸಿಕ್ಕಿದೆ. ಇದ್ರಿಂದ ಕಂಗಾಲಾದ ಕುಟುಂಬಸ್ಥರೆಲ್ಲರೂ ಅಗಸ್ಟ್ 03 ರಂದು ಆಸ್ಪತ್ರೆ ಬಳಿ ಜಮಾಯಿಸಿ ಮೃತದೇಹ ತೋರಿಸುವಂತೆ ಬೆಳಿಗ್ಗೆಯಿಂದ ಕಾದರೂ 3 ಗಂಟೆಗೆ ಮೃತದೇಹವನ್ನು ತೋರಿಸಿದ್ದಾರೆ. ಆದ್ರೆ ಮೂರು ದಿನ ಕಳೆದರೂ ನಮಗ್ಯಾಕೆ ಮಾಹಿತಿ ಕೊಡಲಿಲ್ಲ ಅಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೃತದೇಹ ಕೊಳೆತು ಮುಖ ದೇಹವೆಲ್ಲಾ ಹುಳು ಹಿಡಿದ ನಂತರ ಮೃತದೇಹ ದರ್ಶನ ಮಾಡಿಸಿದ್ದಾರೆ. ಇದ್ರಿಂದ ಸಂಬಂಧಿಕರು ಕೊನೆ ಬಾರಿ ಮುಖ ನೋಡಲು ಅವಕಾಶ ಮಾಡಿಕೊಡದ ಆಸ್ಪತ್ರೆಯ ವರ್ತನೆ ವಿರುದ್ದ ಕಿಡಿಕಾರಿದ್ದಾರೆ.
ಕೋವಿಡ್ ಸೋಂಕಿತ ಮೃತಪಟ್ಟು ಮೂರು ದಿನ ಕಳೆದರೂ ಮನೆಯವರಿಗೆ ಮಾಹಿತಿ ಇಲ್ಲ – ಮೃತನ ಸಂಬಂಧಿಕರಿಂದ ಆಕ್ರೋಶ
TRENDING ARTICLES