Sunday, January 19, 2025

ಶಾಸಕರಿಗೆ ರಾಖಿ ಕಟ್ಟಿದ ಮಹಿಳೆಯರು..

ಕೊಪ್ಪಳ : ಇಂದು ರಾಖಿ ಹಬ್ಬ.. ನಾಡಿನೆಲ್ಲೆಡೆ ತಂಗಿಯರು ಅಣ್ಣಂದಿರಿಗೆ ರಾಖಿ ಕಟ್ಟಿ ರಕ್ಷಾ ಬಂಧನ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಾರೆ. ಅದೇ ರೀತಿ ಕೊಪ್ಪಳದ ಕನಕಗಿರಿ ಕ್ಷೇತ್ರದ ಶಾಸಕ ಬಸವರಾಜ ದಡೆಸೂಗೂರು ಅವರಿಗೂ ಕ್ಷೇತ್ರದ ಮಹಿಳೆಯರು ರಾಖಿ ಕಟ್ಟಿ ಶಾಸಕರಿಗೆ ಶುಭಾಶಯ ಕೊರಿದರು.. ಕಳೆದ ಹಲವು ದಿನಗಳಿಂದ ಕೊವಿಡ್19 ಜಾಗೃತಿ ಕಾರ್ಯಕ್ರಮದಲ್ಲಿ ಬ್ಯುಸಿ ಇರುವ ಶಾಸಕ ಬಸವರಾಜ ದಡೆಸೂಗೂರು ಅವರಿಗೆ ಇಂದು ಕನಕಗಿರಿ ಕ್ಷೇತ್ರದ ಮಹಿಳೆಯರು ರಾಖಿ ಕಟ್ಟುವ ಮೂಲಕ ನಮ್ಮ ಶಾಸಕರು ನಮಗೆ ಅಣ್ಣನ ಸಮಾನ ಎನ್ನುವ ಸಂದೇಶ ಸಾರಿದರು.. ಇನ್ನೂ ಶಾಸಕ ಬಸವರಾಜ ದಡೆಸೂಗೂರು ಸಹ ರಾಖಿ ಕಟ್ಟಿದ ಎಲ್ಲಾ ಮಹಿಳೆಯರಿಗೂ ಪ್ರೀತಿಯ ಉಡುಗೊರೆ ನೀಡಿ ರಕ್ಷಾ ಬಂಧನದ ಶುಭಾಶಯ ತಿಳಿಸಿದರು‌..

ಶುಕ್ರಾಜ ಕುಮಾರ್ ಪವರ್ ಟಿವಿ ಕೊಪ್ಪಳ

RELATED ARTICLES

Related Articles

TRENDING ARTICLES