ಹಾಸನ : ಹಾಸನದಲ್ಲಿ ಕೊರೋನಾ ಸಾವಿನ ಸರಣಿ ಮುಂದುವರೆದಿದ್ದು, ಡೆಡ್ಲಿ ವೈರಸ್ ಕೊರೋನಾ ಇಂದು ಐವರನ್ನು ಬಲಿ ಪಡೆದುಕೊಂಡಿದೆ. ಹಾಸನ ತಾಲೂಕು ಮೂಲದ (71) ವರ್ಷದ ವೃದ್ದ, ಅರಕಲಗೂಡು ಮೂಲದ ಪುರುಷ (58), ಚನ್ನರಾಯಪಟ್ಟಣ ಮೂಲದ (50) ವರ್ಷದ ಪುರುಷ, ಬೇಲೂರು ಮೂಲದ (75) ವರ್ಷದ ವೃದ್ದ ಹಾಗೂ ಅರಸೀಕೆರೆ ಮೂಲದ (65) ವರ್ಷದ ಮಹಿಳೆ ಸೇರಿ ಐವರು ಸಾವನ್ನಪ್ಪಿದ್ದಾರೆ. ಎಲ್ಲರೂ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೇ ಇಂದು ಐವರೂ ಸಾವನ್ನಪ್ಪಿದ್ದಾರೆ. ಜಿಲ್ಲೆಯಲ್ಲಿ ಒಟ್ಟು ಕೊರೋನಾ ಸಾವಿನ ಸಂಖ್ಯೆ 70 ಕ್ಕೇರಿದೆ. ಸರ್ಕಾರದ ಮಾರ್ಗಸೂಚಿಯಂತೆ ಅಂತ್ಯಕ್ರಿಯೆಯನ್ನು ಆರೋಗ್ಯ ಇಲಾಖೆ ಮಾಡಿದೆ. ಸಾವನ ಸಂಖ್ಯೆಯಿಂದ ಜಿಲ್ಲೆಯ ಜನರಲ್ಲಿ ಆತಂಕ ಹೆಚ್ಚಾಗಿದೆ. ಜಿಲ್ಲೆಯಲ್ಲಿ ಇಂದು ಬರೊಬ್ಬರಿ 131 ಕೊರೋನಾ ಕೇಸ್ ಪತ್ತೆಯಾಗಿವೆ.