ನವದೆಹಲಿ : ಸೆಪ್ಟೆಂಬರ್ 19 ರಿಂದ ನವೆಂಬರ್ 10ರವರೆಗೆ ಯುಎಇನಲ್ಲಿ 13ನೇ ಆವೃತ್ತಿ ಐಪಿಎಲ್ ನಡೆಯಲಿದೆ. ಟೂರ್ನಿ ನಡೆಸಲು ಬಿಸಿಸಿಐ ಕೇಂದ್ರದ ಒಪ್ಪಿಗೆಯನ್ನೂ ಪಡೆದಿದೆ. ಇದು ಕ್ರಿಕೆಟ್ ಅಭಿಮಾನಿಗಳ ಖುಷಿಗೆ ಕಾರಣವಾಗಿದೆ. ಆದ್ರೆ, ಕ್ರಿಕೆಟ್ ಹಬ್ಬ ಐಪಿಎಲ್ ಪಕ್ಕಾ ಆದ ಬೆನ್ನಲ್ಲೇ ಅಭಿಮಾನಿಗಳು #Boycott IPL ಅಭಿಯಾನ ಆರಂಭಿಸಿದ್ದಾರೆ.
ಅರೆ, ಇದೇನು ಕಥೆ? ಇಷ್ಟು ದಿನ ಯಾವಾಗಪ್ಪಾ ಐಪಿಎಲ್ ಶುರುವಾಗುತ್ತೆ ಅಂತ ಕಾಯ್ತಿದ್ದವರು, ದಿಢೀರ್ ಅಂತ IPLಅನ್ನೇ ಬಹಿಷ್ಕರಿಸುತ್ತಿದ್ದಾರಲ್ಲಾ ಅಂತ ಆಶ್ಚರ್ಯ ಆಗುತ್ತೆ.. ನಂಬಲು ಸ್ವಲ್ಪ ಕಷ್ಟನೂ ಆಗುತ್ತೆ. ಆದ್ರೂ ನಂಬ್ಲೇ ಬೇಕು..! ಕ್ರಿಕೆಟ್ ಅಭಿಮಾನಿಗಳ ಈ ಸಿಟ್ಟಿಗೆ ಕಾರಣ ಚೀನಾ…
IPLನಲ್ಲಿ ಎಲ್ಲಾ ಹಿಂದಿನ ಪ್ರಾಂಚೈಸಿಗಳೇ ಮುಂದುವರೆಯುತ್ತಾರೆ ಅಂತ ಬಿಸಿಸಿಐ ಹೇಳಿದೆ. ಹಾಗೆಯೇ ಚೀನಾದ ಮೊಬೈಲ್ ಸಂಸ್ಥೆ ವಿವೋ ಈ ಬಾರಿಯೂ ಐಪಿಎಲ್ ಶೀರ್ಷಿಕೆ ಪ್ರಾಯೋಜಕರಾಗಿ ಮುಂದುವರೆಯುವುದಾಗಿ ಘೋಷಿಸಿದೆ. ಇದು ಭಾರತೀಯ ಕ್ರಿಕೆಟ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದ್ದು, ವಿವೋ ಪ್ರಾಯೋಜಕತ್ವವನ್ನು ಬಹಿಷ್ಕರಿಸದಿದ್ದರೆ, ನಾವು ಐಪಿಎಲ್ ಅನ್ನೇ ಬಹಿಷ್ಕರಿಸುತ್ತೇವೆ ಅಂತ ಟ್ವಿಟ್ಟರ್ನಲ್ಲಿ #BoycottIPL ಅಭಿಯಾನವನ್ನು ನೆಟ್ಟಿಗರು ಆರಂಭಿಸಿದ್ದಾರೆ.