ಹಾಸನ : ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಯುವತಿಯನ್ನು ತಮ್ಮ ವಾಹನದಲ್ಲಿ ಕರೆತಂದು ಅಸ್ಪತ್ರೆಗೆ ದಾಖಲಿಸಿ ಪ್ರವಾಸೋದ್ಯಮ ಸಚಿವ ಮಾನವೀಯತೆ ಮೆರೆದಿದ್ದಾರೆ. ಚಿಕ್ಕಮಗಳೂರಿನಿಂದ ಹಾಸನ ಮಾರ್ಗವಾಗಿ ಬೆಂಗಳೂರಿಗೆ ಹೊರಟಿದ್ದ ಪ್ರವಾಸೋದ್ಯಮ ಸಚಿವ ಸಿಟಿ ರವಿ ಬರುತ್ತಿದ್ದ ಮಾರ್ಗದಲ್ಲಿ ವಾಹನ ಅಪಘಾತಕ್ಕೆ ಒಳಗಾದ ಯುವತಿಯನ್ನು ತಮ್ಮ ಕಾರಿನಲ್ಲಿ ಕರೆತಂದು ಹಾಸನದ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಹಾಸನದ ಹೊರವಲಯದ ಉದ್ದೂರು ಹೊಸಳ್ಳಿ ಸಮೀಪ ಯುವತಿಯೊಬ್ಬಳು ದ್ವಿಚಕ್ರವಾಹನದಲ್ಲಿ ಬರುವಾಗ ತನ್ನ ವಾಹನಕ್ಕೆ ಸಿಲುಕಿಕೊಂಡ ಹಿನ್ನೆಲೆಯಲ್ಲಿ ಸ್ವಯಂಕೃತ ಅಪರಾಧ ಮಾಡಿಕೊಂಡಿದ್ದು ಅರೆಪ್ರಜ್ಞಾವಸ್ಥೆಯಲ್ಲಿ ಸಿಲುಕಿಕೊಂಡಿದ್ದು ಯಾಕೆ ಏನು ಎಂದು ವಿಚಾರಿಸಿ ತಕ್ಷಣ ಹಾಸನದ ನಾನ್ ಕೋವಿಡ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ ಮಾನವೀಯತೆ ಮೆರೆದಿದ್ದಾರೆ.