ಬಾಗಲಕೋಟೆ : ಕೋವಿಡ್ ಆಸ್ಪತ್ರೆಗಳಲ್ಲಿ ಸೋಂಕಿತರ ಚಿಕಿತ್ಸೆಗೆ ಎಲ್ಲ ಸೌಕರ್ಯಗಳನ್ನು ಕಲ್ಪಿಸಲಾಗಿದೆ ಅಂತಾ ಹೆಳುತ್ತೆ ಸರ್ಕಾರ. ಆದ್ರೆ ಇಂದು ಕೋವಿಡ್ ಆಸ್ಪತ್ರೆಗಳಿಗೆ ದಾಖಲಾದ ರೋಗಿಗಳ ನರಕಯಾತನೆ ಹೇಳತಿರದು. ಅಂತದೊಂದು ಘಟನೆಗೆ ಇಂದು ಸಾಕ್ಷಿಯಾಗಿದ್ದು ಬಾಗಲಕೋಟೆ ಜಿಲ್ಲಾ ಕೋವಿಡ್ ಆಸ್ಪತ್ರೆ. ಹೌದು ಮುಧೋಳ ನಗರದ ಮಹಿಳೆ ಪತಿಯನ್ನು ಉಳಿಸಿಕೊಡಿ ಎಂದು ಕಣ್ಣೀರಿಟ್ಟು ಕೈಮುಗಿದು ಗೋಳಾಡಿದ ದೃಶ್ಯ ಜಿಲ್ಲಾ ಕೋವಿಡ್ ಆಸ್ಪತ್ರೆ ಬಳಿ ನಡೆಯಿತು.
ಕಳೆದ ಭಾನುವಾರ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲಾದ ಶಂಕಿತ ಕೆ.ಎಸ್.ಆರ್.ಟಿ.ಸಿ ಬಸ್ ಕಂಡಕ್ಟರ್ ಗೆ ಸೂಕ್ತ ಚಿಕಿತ್ಸೆ ದೊರೆಯದೆ ನರಳಾಡುತ್ತಿರೋ ದೃಶ್ಯ ಆತನ ಕುಟುಂಬದವರಲ್ಲಿ ದುಖ: ಹೆಚ್ಚಿಸಿತು. ಮೊದಲೇ ಅಸ್ತಮಾ ಖಾತಿಲೆಗೆ ತುತ್ತಾದ ವ್ಯಕ್ತಿಗೆ ತೀವ್ರ ಉಸಿರಾಟದ ತೊಂದರೆಯುಂಟಾಗಿ ಮಾತನಾಡಲಾಗದೇ ಕಣ್ಣೀರಿಡುತ್ತಿದ್ದನ್ನ ವಿಡಿಯೋ ಕಾಲ್ ನಲ್ಲಿ ನೋಡಿದ ಪತ್ನಿ ಶಾಂತಾಬಾಯಿ ಗಂಡನ ನರಳಾಟ ಬಹಿರಂಗ ಪಡಿಸಿದಳು. ನಮ್ಮ ಮನೆಯವರನ್ನ ಉಳಿಸಿಕೊಡಿ ಎಂದು ಕೈಮುಗಿದು ಕಣ್ಣೀರಿಟ್ಟಳು ಪತ್ನಿ ಶಾಂತಾಬಾಯಿ..