ಮಂಡ್ಯ : ಯುವಕನೊಬ್ಬನಿಗೆ ಬಸ್ಸಿನಲ್ಲಿ ಸಹ ಪ್ರಯಾಣಿಕಳಾಗಿದ್ದ ಯುವತಿಯೊಬ್ಬಳು ಹಿಗ್ಗಾಮುಗ್ಗ ಥಳಿಸಿದ ಘಟನೆ ಮಂಡ್ಯದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ನಡೆದಿದೆ.
ಗುರುವಾರ ಮಧ್ಯಾಹ್ನ ಮಂಡ್ಯ ಕೆ.ಎಸ್.ಆರ್.ಟಿ.ಸಿ. ನಿಲ್ದಾಣದಲ್ಲಿ ಪಾಂಡವಪುರಕ್ಕೆ ತೆರಳಲು ಬಸ್ಸೊಂದು ರೆಡಿಯಾಗಿತ್ತು.
ಪ್ರಯಾಣಿಕರು ಎಂದಿನಂತೆ ತಮ್ಮ ತಮ್ಮ ಊರಿಗೆ ತೆರಳಲು ಬಸ್ ಹತ್ತಿದ್ದಾರೆ. ಅದೇ ಬಸ್ ನಲ್ಲಿ ಪಾಂಡವಪುರದ ಯುವತಿಯೊಬ್ಬಳು ಕುಳಿತಿದ್ದಳು. ಆಕೆ ಕುಳಿತಿದ್ದ ಹಿಂಬದಿ ಸೀಟಿನಲ್ಲಿ ಯುವಕನೊಬ್ಬ ಕುಳಿತಿದ್ದ. ಮೊದಲು ಆಕೆ ಕಾಲು ಟಚ್ ಮಾಡೋದು, ಬಳಿಕ ಮೈ, ಕೈ ಮುಟ್ಟುವ ಪ್ರಯತ್ನ ಮಾಡಿದ್ದಾನೆ.
ಹಿಂಬದಿ ಕುಳಿತು ಕಾಮಚೇಷ್ಟೇ ಮೆರೆಯುತ್ತಿದ್ದವನ ಕುತ್ತಿಗೆ ಪಟ್ಟಿ ಹಿಡಿದು ಹಿಗ್ಗಾಮುಗ್ಗ ಥಳಿಸಿದ್ದಾಳೆ.
ಈ ವೇಳೆ ಸಹಾಯಕ್ಕಾಗಿ ಹಾಗೂ ಆತನನ್ನು ಪೊಲೀಸರಿಗೆ ಒಪ್ಪಿಸಲು ಸಹಕರಿಸುವಂತೆ ಸ್ಥಳೀಯರ ಸಹಾಯ ಕೋರಿದ್ದಾಳೆ.
ಕೊರೋನಾ ಭಯದಿಂದ ಯಾರೊಬ್ಬರೂ ಆತನನ್ನ ಮುಟ್ಟೋಕೆ ಧೈರ್ಯ ಮಾಡಲಿಲ್ಲ. ಇದರಿಂದ ಆ ಯುವತಿ ಕೈನಿಂದ ತಪ್ಪಿಸಿಕೊಂಡ ಯುವಕ ಬಸ್ಸಿನಿಂದ ಇಳಿದು ಪರಾರಿಯಾಗಿದ್ದಾನೆ.
ಯುವತಿ ಸಹಾಯಕ್ಕೆ ಬಾರದ ಸ್ಥಳೀಯರ ವರ್ತನೆ ವಿರುದ್ಧ ನೊಂದ ಯುವತಿ ಅಸಮಾಧಾನ ಹೊರ ಹಾಕಿದ್ದಾರೆ.
ಬಸ್ಸಿನಲ್ಲೇ ಯುವಕನಿಗೆ ಯುವತಿಯಿಂದ ಹಿಗ್ಗಾಮುಗ್ಗ ಗೂಸಾ; ಯಾಕೆ ಗೊತ್ತಾ?
TRENDING ARTICLES