ಬಳ್ಳಾರಿ : ಇಂದಿನಿಂದ ನಾಳೆಯವರೆಗೆ ರಾಜ್ಯಾದ್ಯಾಂತ ಸಿಇಟಿ ಪರೀಕ್ಷೆಗಳಯ ನಡೆಯಲಿವೆ. ವಿವಿಧ ವೃತ್ತಿಪರ ಕೋರ್ಸ್ ಗಳಿಗೆ ಪ್ರವೇಶಾತಿ ಬಯಸಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ
ಇದರ ಜೊತೆ ವಿಶೇಷವಾಗಿ ಕೊವಿಡ್ ಸೋಂಕಿತರಿಗೂ ಸಹ ಸಿಇಟಿ ಪರೀಕ್ಷೆ ಬರೆಯಲು ಅನುಮತಿ ನೀಡಲಾಗಿದೆ
ಬಳ್ಳಾರಿಯ ಡೆಂಟಲ್ ಕಾಲೇಜಿನಲ್ಲಿ ಕೊವಿಡ್ ಸೋಂಕಿತ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಅವಕಾಶ ಕಲ್ಪಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು 06 ಕೊವಿಡ್ ಸೋಂಕಿತ ವಿದ್ಯಾರ್ಥಿಗಳಿದ್ದಾರೆ. ಬಳ್ಳಾರಿ,ಹಡಗಲಿ,ಸಿರುಗುಪ್ಪದ ತಲಾ ಎರಡು ವಿದ್ಯಾರ್ಥಿಗಳಿಗೆ ಕೊರೊನಾ ಪಾಸಿಟಿವ್ ಅಗಿತ್ತು. ಇದೇ ಸಂದರ್ಭದಲ್ಲಿ ಸಿಇಟಿ ಎಕ್ಸಾಂ ಬರೆಯುವುದು ಹೇಗೆಂದು ವಿದ್ಯಾರ್ಥಿಗಳು ಚಿಂತಿತರಾಗಿದ್ದರು. ಇದೀಗ ಸೋಂಕಿತ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆ ಪ್ರತ್ಯೇಕ ವ್ಯವಸ್ಥೆ ಮಾಡಿದೆ. ಬಳ್ಳಾರಿ ಜಿಲ್ಲೆಯ ಆರು ವಿದ್ಯಾರ್ಥಿಗಳು ಸಹ ಇಂದು ಡೆಂಟಲ್ ಕಾಲೇಜಿಗೆ ಪರೀಕ್ಷೆಗೆ ಹಾಜರಾದರು. ಪಿಪಿಇ ಕಿಟ್ ಹಾಕಿಕೊಂಡು ಸೋಂಕಿತ ವಿದ್ಯಾರ್ಥಿಗಳನ್ನು ಕರೆತರಲಾಯಿತು. ಈಗಾಗಲೇ ಡೆಂಟಲ್ ಕಾಲೇಜನ್ನು ಕೊವಿಡ್ ಅಸ್ಪತ್ರೆ ಆಗಿ ಮಾಡಲಾಗಿದ್ದು. ಅದೇ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ವಿದ್ಯಾರ್ಥಿಗಳಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ
ಅರುಣ್ ನವಲಿ ಪವರ್ ಟಿವಿ ಬಳ್ಳಾರಿ