Saturday, January 18, 2025

4 ದಿನದ ಮಗುವಿಗೆ ಬ್ಲಡ್ ಕ್ಯಾನ್ಸರ್‌ | ಶಿವಮೊಗ್ಗದಿಂದ ಮಣಿಪಾಲ್ ಆಸ್ಪತ್ರೆವರೆಗೂ ಜಿರೋ ಟ್ರಾಫಿಕ್ | ಆ್ಯಂಬುಲೆನ್ಸ್ ನಲ್ಲಿ ಮಗು ರವಾನೆ..

ಶಿವಮೊಗ್ಗ : ಅದಿನ್ನು ಬಾಳಿ ಬದುಕಬೇಕಾದ ಕಂದಮ್ಮ. ಜಸ್ಟ್ ನಾಲ್ಕು ದಿನದ ಕೆಳಗಷ್ಟೇ ಭುವಿಗೆ ಕಾಲಿಟ್ಟಿದೆಯಷ್ಟೇ. ಯಾರ ಕಣ್ಣು ಬಿದ್ದಿತ್ತೋ ಏನೋ, ಸುಂದರ ಈ ಹಸುಗೂಸಿಗೆ ಬ್ಲಡ್ ಕ್ಯಾನ್ಸರ್ ವಕ್ಕಿರಿಸಿಕೊಂಡುಬಿಟ್ಟಿದೆ. ಇದು ಸುಳ್ಳು ಎಂದು ಪೋಷಕರು ಹೇಳಿಕೊಂಡು ಸಮಾಧಾನ ಮಾಡಿಕೊಂಡರೂ, ವಾಸ್ತವವಾಗಿ ಇದು ಕಟು ಸತ್ಯವಾಗಿದೆ. ಎಸ್… ಪಾಪ ಈ ಮುದ್ದು ಕಂದಮ್ಮ, ತಾನು ಜನಿಸಿ, ಜೊತೆಯಲ್ಲಿಯೇ, ರಕ್ತದ ಕ್ಯಾನ್ಸರ್ ಕೂಡ ಹೊತ್ತು ತಂದಿದೆ. ಅಂದಹಾಗೆ, ಭದ್ರಾವತಿಯ ಅಶ್ವಥ್ ನಗರದ ದೇವೆಂದ್ರ ಮತ್ತು ಸುಪ್ರಿಯಾ ದಂಪತಿಗೆ ಕಳೆದ ನಾಲ್ಕು ದಿನದ ಹಿಂದೆ ಹೆಣ್ಣು ಮಗು ಜನಿಸಿತ್ತು. ಈ ಸಮಯದಲ್ಲಿ ಆರೋಗ್ಯ ಪರೀಕ್ಷೆ ನಡೆಸಿದ್ದ ವೈದ್ಯರಿಗೆ ಶಾಕ್ ಆಗಿದೆ. ಈ ಮಗುವಿಗೆ ಬ್ಲಡ್ ಕ್ಯಾನ್ಸರ್ ಇರುವುದು ಪತ್ತೆಯಾಗಿದೆ. ಈ ವಿಷಯವನ್ನು ಈ ಮುದ್ದು ಕಂದಮ್ಮಳ ಪೋಷಕರಿಗೆ ತಿಳಿಸಿದ್ದು, ಈ ವೇಳೆ ಪೋಷಕರು ನಿಂತ ನೆಲ ಅದುರಿ ಹೋಗಿದೆ. ತಡೆದುಕೊಳ್ಳಲಾರದಷ್ಟು ನೋವಾಗಿದೆ. ಆದ್ರೆ, ವಾಸ್ತವವನ್ನು ಎದುರಿಸಬೇಕಾಗಿದ್ದು, ಹೀಗಾಗಿ, ಇಂದು ಈ ಹಸುಗೂಸನ್ನು ಶಿವಮೊಗ್ಗದ ನಾರಾಯಣ ಹೃದಯಾಲಯದಿಂದ ಮಣಿಪಾಲ್ ಆಸ್ಪತ್ರೆಗೆ ರವಾನಿಸಲಾಯಿತು.

ರಕ್ತದ ಕ್ಯಾನ್ಸರ್ ನಿಂದ ಬಳಲುತ್ತಿದ್ದ ನಾಲ್ಕು ದಿನದ ಮಗುವನ್ನು ಶಿವಮೊಗ್ಗದಿಂದ ಮಣಿಪಾಲ್ ಆಸ್ಪತ್ರೆಗೆ ಅಂಬ್ಯುಲೆನ್ಸ್ ಮೂಲಕ ಜಿರೋ ಟ್ರಾಫಿಕ್ ನಲ್ಲಿ ರವಾನೆ ಮಾಡಲಾಯಿತು. ಬ್ಲಡ್ ಕ್ಯಾನ್ಸರ್ ಹಿನ್ನೆಲೆಯಲ್ಲಿ, ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ್ ನ ಆಸ್ಪತ್ರೆಗೆ ರವಾನೆ ಮಾಡಲಾಯಿತು. ಈ ಹಿನ್ನೆಲೆಯಲ್ಲಿ ಶಿವಮೊಗ್ಗದಿಂದ ಮಣಿಪಾಲ್ ವರೆಗೂ ಜಿರೋ ಟ್ರಾಫಿಕ್ ವ್ಯವಸ್ಥೆಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಾಂತರಾಜು ಅವರು ಮಾಡಿದ್ದರು. ಶಿವಮೊಗ್ಗದಿಂದ ಉಡುಪಿಯ ಗಡಿ ಭಾಗದ ತನಕ ಶಿವಮೊಗ್ಗ ಜಿಲ್ಲೆಯ ‍ಪೊಲೀಸರು ಜಿರೋ ಟ್ರಾಫಿಕ್ ವ್ಯವಸ್ಥೆ ಮಾಡಿದ್ದರು. ನಂತರ ಉಡುಪಿ ಪೊಲೀಸರು ಜಿರೋ ಟ್ರಾಫಿಕ್ ನಲ್ಲಿ ಕರೆದುಕೊಂಡು ಹೋಗಿದ್ದು, ಇದೀಗ ಮಣಿಪಾಲ್ ಆಸ್ಪತ್ರೆಯಲ್ಲಿ ಮಗುವಿಗೆ ಚಿಕಿತ್ಸೆ ಮುಂದುವರೆಸಲಾಗಿದೆ.

RELATED ARTICLES

Related Articles

TRENDING ARTICLES