Saturday, January 18, 2025

ಬೃಹತ್ ಗಾತ್ರದ ಹೆಬ್ಬಾವು ಸೆರೆ..!

ಚಿಕ್ಕಮಗಳೂರು :  ಜಿಲ್ಲೆಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಸೆರೆ ಹಿಡಿಯಲಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ವಿದ್ಯಾರಣ್ಯ ಪುರದ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಂಡಗದ್ದೆ ಉಮೇಶ್ ಎಂಬುವರ ತೋಟದಲ್ಲಿ ಬೃಹತ್ ಗಾತ್ರದ ಹೆಬ್ಬಾವು ಕಾಣಿಸಿಕೊಂಡಿದ್ದು, ಈ ಹೆಬ್ಬಾವನ್ನು ನೋಡಿದ ತೋಟದ ಮಾಲೀಕ ಹಾಗೂ ಕಾರ್ಮಿಕರು ಬೆಚ್ಚಿ ಬಿದ್ದಿದ್ದಾರೆ. ಕೂಡಲೇ ಉರಗ ತಜ್ಞ ಅರ್ಜುನ್ ಅವರಿಗೆ ಪೋನ್ ಮಾಡಿ ತೋಟದ ಮಾಲೀಕ ಉಮೇಶ್ ವಿಚಾರ ತಿಳಿಸಿದ್ದು, ಕೂಡಲೇ ಸ್ಥಳಕ್ಕೇ ಆಗಮಿಸಿದ ಸ್ನೇಕ್ ಅರ್ಜುನ್ ಅವರು ಈ ಬೃಹತ್ ಗಾತ್ರದ ಹೆಬ್ಬಾವು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಹೆಬ್ವಾವು ಬರೋಬರೀ 14 ಅಡಿ ಗಾತ್ರ ಉದ್ದವಿದೆ. ಈ ಭಾಗದಲ್ಲಿ ಹೆಚ್ಚಿನ ಅರಣ್ಯ ಪ್ರದೇಶವಿರೋದರಿಂದ ಈ ಭಾಗದಿಂದಾ ನಗರ ಪ್ರದೇಶಕ್ಕೆ ಹಾವುಗಳು ಬರುವುದು ಸಾಮಾನ್ಯವಾಗಿದೆ. ಸೆರೆ ಹಿಡಿದ ಈ ಹೆಬ್ಬಾವನ್ನು ಸ್ನೇಕ್ ಅರ್ಜುನ್ ಅವರು ಸುರಕ್ಷಿತವಾಗಿ ಸ್ಥಳೀಯ ಕಾಂಚೀನಗರದ ಅರಣ್ಯ ಪ್ರದೇಶದಲ್ಲಿ ಬಿಟ್ಟಿದ್ದಾರೆ…

ಸಚಿನ್ ಶೆಟ್ಟಿ ಚಿಕ್ಕಮಗಳೂರು…

RELATED ARTICLES

Related Articles

TRENDING ARTICLES