ಬೆಂಗಳೂರು ಹೊರವಲಯದ ಆನೇಕಲ್ ವಿಧಾನಸಭಾ ಕ್ಷೇತ್ರದ ಶಾಸಕ ಬಿ ಶಿವಣ್ಣ ಕಳೆದ 18 ದಿನಗಳ ಹಿಂದೆ ಕೊರೋನ ಪಾಸಿಟಿವ್ ಹಿನ್ನೆಲೆಯಲ್ಲಿ ಆಸ್ಪತ್ರೆ ಗೆ ದಾಖಲಾಗಿದ್ದರು. ಅವರ ಜೊತೆಗೆ ಅವರ ಮಕ್ಕಳಿಗೂ ಸಹ ಸೋಂಕು ಖಚಿತವಾಗಿತ್ತು. ಇದೀಗ ಗುಣಮುಖರಾಗಿ ಬಂದಿರುವ ಶಿವಣ್ಣ ಮಾಧ್ಯಮಗಳ ಮೂಲಕ ಜನಸಾಮಾನ್ಯರಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ.
ಕೊರೋನ ಬಂದಾಗ ಭಯಪಡದೆ ಧೈರ್ಮಯವಾಗಿರಿ . ಮನೆಯಲ್ಲೇ ಇರಿ, ಮಾಸ್ಕ್ ಹಾಗೂ ಸ್ಯಾನಿಟೈಸರ್ ಬಳಸಿ. ಜೊತೆಗೆ ಬಿಸಿನೀರು, ಬಿಸಿ ಆಹಾರ ಪದ್ಧತಿ ಅಳವಡಿಸಿಕೊಂಡರೆ ಸಾಕು ಕೊರೋನ ದಿಂದ ಭಯ ಪಡುವ ಅಗತ್ಯತೆ ಇಲ್ಲ. ಆಗಾಗ ಕೈಕಾಲು ತೊಳೆದುಕೊಳ್ಳಬೇಕು ಕೊರೋನಾ ಬಂದಾಗ ಭಯ ಪಡದೆ ಧೈರ್ಯವಾಗಿದ್ದರೆ ಯಾವುದೇ ಸಮಸ್ಯೆ ಆಗಲ್ಲ ಎಂದು ತಿಳುವಳಿಕೆ ಹೇಳಿದ್ದಾರೆ.