ಚಿಕ್ಕಮಗಳೂರು : ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಗೌರಿಗದ್ದೆಯಿಂದ ದತ್ತಾತ್ರೇಯರ ಆಶೀರ್ವಾದದ ಮೃತ್ತಿಕೆ ರವಾನೆ ಮಾಡಲಾಗಿದೆ. ಗೌರಿಗದ್ದೆ ಆಶ್ರಮದ ಅವಧೂತ ವಿನಯ್ ಗುರೂಜಿಯಿಂದ ಭಿಕ್ಷೆ ಪಾತ್ರೆಗೆ ಮರಳು ಹಾಕಿ ಕಳುಹಿಸಿದ್ದಾರೆ. ಗೌರಿಗದ್ದೆಯ ಜೌಧಂಬರ ವೃಕ್ಷದ ಕೆಳಗೆ ರಾಮೇಶ್ವರದಿಂದ ತಂದ ಮರಳಿನಲ್ಲಿ ಲಿಂಗ ಪೂಜೆ ಮಾಡಿ ಅಯೋಧ್ಯೆಗೆ ಕಳಿಸಿ ಕೊಡಲಾಗಿದೆ. ದೇಶದ 18 ದತ್ತ ಕ್ಷೇತ್ರದ ಮಣ್ಣು ತರುವಂತೆ ಪ್ರಧಾನಿ ಮೋದಿ ಸಂದೇಶ ಹಿನ್ನೆಲೆ ಬಜರಂಗದಳದ ಪ್ರಮುಖ ಕಾರ್ಕಳ ಸುನೀಲ್ .ಕೆ ಕಡೆಯಿಂದ ವಿನಯ್ ಗುರೂಜಿ ಮರಳನ್ನು ಅಯೋಧ್ಯೆಗೆ ಕಳುಹಿಸಿದ್ದಾರೆ. ಕಲಿಯುಗದ 19ನೇ ದತ್ತ ಕ್ಷೇತ್ರ ಗೌರಿಗದ್ದೆಯ ಸ್ವರ್ಣ ಪೀಠೀಕಪುರದಿಂದಲೂ ಮಣ್ಣು ಕೂಡ ರವಾನಿಸಲಾಗಿದೆ. ಆಗಸ್ಟ್ 5 ರಂದು ಅಯೋಧ್ಯೆಯಲ್ಲಿ ನಡೆಯುವ ಭೂಮಿ ಪೂಜೆಗೆ ಮರಳು ಹಾಗೂ ಮಣ್ಣು ತಲುಪಲಿದೆ. ಇತ್ತೀಚಿಗೆ ಜಿಲ್ಲೆಯ ರಂಭಾಪುರಿ ಪೀಠ, ಶೃಂಗೇರಿ ಶಾರದಾಂಭೆ ಸನ್ನಿದಿ ಹಾಗೂ ದತ್ತಪೀಠದ ಮಣ್ಣು ಹಾಗೂ ಹೊನ್ನಮ್ಮನಹಳ್ಳದ ಮೃತ್ತಿಕೆಯನ್ನು ಕಳುಹಿಸಲಾಗಿತ್ತು.
-ಸಚಿನ್ ಶೆಟ್ಟಿ, ಚಿಕ್ಕಮಗಳೂರು