Saturday, January 18, 2025

ಕೊರೊನಾ ಎಫೆಕ್ಟ್ :ಚಿಕನ್ ಉದ್ಯಮಕ್ಕೆ ಭಾರೀ ಹೊಡೆತ..!

ಮೈಸೂರು : ಕೊರೊನಾ ನಿಯಂತ್ರಣ ಸಧ್ಯಕ್ಕೆ ದಾರಿ ಕಾಣುತ್ತಿಲ್ಲ.ಆದ್ರೆ ದಿನೇ ದಿನೇ ಹೆಚ್ಚುತ್ತಿರುವ ಸಾವಿನ ಸಂಖ್ಯೆ ಭೀತಿಯನ್ನು ಮತ್ತಷ್ಟು ಹೆಚ್ಚಿಸುತ್ತಿದೆ. ಚಿಕನ್ ತಿಂದ್ರೆ ಕೊರೊನಾ ಬರುತ್ತೆ ಎಂಬ ಸಂದೇಶವೊಂದು ಇಡೀ ಕೋಳಿ ಉದ್ಯಮವನ್ನೇ ಅಲುಗಾಡಿಸಿದೆ. ಕೋಳಿ ಮಾಂಸ ತಿಂದ್ರೆ ಇಮ್ಯೂನಿಟಿ ಪವರ್ ಹೆಚ್ಚುತ್ತೆ ಎಂಬ ನಂಬಿಕೆ ಇದೆ. ಹೀಗಿದ್ದೂ ಇಂತಹ ತಪ್ಪು ಮಾಹಿತಿಗಳಿಂದ ಇಡೀ ಉದ್ಯಮವೇ ತಲ್ಲಣವಾಗಿದೆ.ಇಂತಹ ತಪ್ಪು ಸಂದೇಶಗಳು ಹರಡುವುದನ್ನ ತಪ್ಪಿಸಬೇಕೆಂಬ ಮನವಿ ಕುಕ್ಕುಟ ಉದ್ಯಮಿಗಳದ್ದು.
ಕೋಳಿ ಮೊಟ್ಟೆಯಿಂದ ಪ್ರಾರಂಭವಾಗಿ ಮಾಂಸ ಗ್ರಾಹಕನ ಕೈ ಸೇರುವ ವರೆಗೆ ಸಾಕಷ್ಟು ಹಂತಗಳನ್ನ ದಾಟಬೇಕಿದೆ. ಆಹಾರ,ಪೋಷಣೆ,ಔಷಧ ಹೀಗೆ ಹತ್ತು ಹಲವು ಹಂತಗಳನ್ನ ದಾಟಬೇಕಿದೆ. ಪ್ರತಿಯೊಂದು ಹಂತದಲ್ಲೂ ಕಾರ್ಮಿಕರ ಪರಿಶ್ರಮ ಇರುತ್ತದೆ.ಲಾಕ್ ಡೌನ್ ಮಧ್ಯೆ ಸರಾಗವಾಗಿ ವಿತರಿಸಲು ಸಾಧ್ಯವಾಗ್ತಿಲ್ಲ. ದರ ಕೈಗೆಟುಕುತ್ತಿಲ್ಲ.ಕೆಲಸ ಮಾಡುವವರಿಗೆ ಕೂಲಿ ಕೊಡಲೂ ಸಾಧ್ಯವಾಗ್ತಿಲ್ಲ.ಸುಮಾರು ೨ ಸಾವಿರ ಕುಟುಂಬಗಳು ಇದನ್ನೇ ನಂಬಿದ್ದಾರೆ.ಇಂತಹ ಸಂಧರ್ಭದಲ್ಲಿ ತಪ್ಪು ಸಂದೇಶ ರವಾನೆಯಾದ್ರೆ ಉದ್ಯಮಕ್ಕೆ ಭಾರಿ ಪೆಟ್ಟು ಬೀಳುವ ಸಾಧ್ಯತೆ ಇದೆ.ಸರ್ಕಾರ ಈಗಾಗಲೇ ಕೊರೊನಾ ಕಪಿಮುಷ್ಟಿಗೆ ಸಿಲುಕಿ ನಲುಗಿದ ಹಲವು ವೃತ್ತಿ ಭಾಂಧವರಿಗೆ ಪರಿಹಾರ ನೀಡಿದೆ.ನಮ್ಮನ್ನಂತೂ ಪರಿಗಣಿಸುತ್ತಿಲ್ಲ.ನಾವು ಅದನ್ನ ಬಯಸುವುದೂ ಇಲ್ಲ.ಸುಳ್ಳು ಸಂದೇಶಗಳನ್ನ ಹರಡದಿದ್ರೆ ಅಷ್ಟೇ ಸಾಕು ಅನ್ನೋದು ಉದ್ಯಮಿಗಳ ಅಭಿಪ್ರಾಯ. ಕೋಳಿ ಮಾಂಸ ತಿಂದರೆ ಕೊರೊನಾ ಬರುತ್ತದೆಂಬ ಸಂದೇಶ ಕೊರೊನಾಗಿಂತ ಅಪಾಯಕಾರಿಯಾಗಿದೆ.ಜನರ ಮನಸ್ಸಿನಲ್ಲಿರುವ ಭಯವನ್ನ ದೂರ ಮಾಡಬೇಕಿದೆ.ಈ ನಿಟ್ಟಿನಲ್ಲಿ ಜನ ಸಹಕರಿಸಬೇಕೆಂಬ ಸಲಹೆ ಕುಕ್ಕುಟ ಉದ್ಯಮಿಗಳದ್ದು.

RELATED ARTICLES

Related Articles

TRENDING ARTICLES