ಚಿಕ್ಕಮಗಳೂರು :ಕೊರೋನಾ ಸೋಂಕಿತ ವ್ಯಕ್ತಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಆ್ಯಂಬುಲೆನ್ಸ್ ತಡವಾಗಿ ಬಂದ ಹಿನ್ನೆಲೆ, ಯುವಕ ಸಾವನ್ನಪ್ಪಿದ್ದಾನೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ, ಲಿಂಗದಹಳ್ಳಿ ಯಲ್ಲಿ 32 ವರ್ಷದ ಯುವಕ ಕೊರೋನಾ ಸೋಂಕಿನಿಂದ ಸಾವನ್ನಪ್ಪಿದ್ದು, ಯುವಕನಿಗೆ ಕೊರೋನ ಟೆಸ್ಟ್ ಅಲ್ಲಿ ಪಾಸಿಟಿವ್ ಬಂದಿತ್ತು. ಕಳೆದ ಒಂದು ವಾರದ ಹಿಂದೆ ಯುವಕನ ಗಂಟಲು ದ್ರವ, ಪರೀಕ್ಷೆಗೆ ಒಳಪಡಿಸಲಾಗಿತ್ತು.ಆದರೆ ಕಳೆದ ಒಂದು ವಾರದಿಂದ ಯುವಕನ ರಿಪೋರ್ಟ್ ಬಂದಿರಲಿಲ್ಲ. ಕಳೆದ 5 ದಿನಗಳ ಹಿಂದೆ ಯುವಕನ ತಾಯಿ ಕೊರೋನ ದಿಂದಾ ಸಾವನ್ನಪ್ಪಿದ್ದರು.ಮೃತ ಯುವಕ ಕಳೆದ ಎರಡು ತಿಂಗಳ ಹಿಂದೆ ಮದುವೆಯಾಗಿದ್ದನು. ಮೊನ್ನೆ ರಾತ್ರಿ ಈ ಯುವಕನಿಗೆ ಆರೋಗ್ಯ ಸರಿ ಇಲ್ಲದೆ, ಮನೆಯಲ್ಲಿ ನರಳಾಟ ಮಾಡಿದ್ದನು. ಮನೆಯವರು ಬೆಳಗ್ಗೆ ಆಂಬುಲೆನ್ಸ್ ಗೆ ಕರೆ ಮಾಡಿ ವಿಚಾರ ತಿಳಿಸಿದರೂ ಮಧ್ಯಾಹ್ನ ದ ವೇಳೆಗೆ ಆಂಬುಲೆನ್ಸ್ ಬಂದಿದೆ. ಎಂಬ ಆರೋಪವನ್ನು ಗ್ರಾಮಸ್ಥರು ಮಾಡುತ್ತಿದ್ದು, ಆರೋಗ್ಯ ಇಲಾಖೆ ಸರಿಯಾಗಿ ಸ್ಪಂಧಿಸದ ಹಿನ್ನೆಲೆ ಯುವಕ ಸಾವನ್ನಪ್ಪಿದ್ದಾನೆ, ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ವರದಿ ಬೇಗ ಬಂದಿದ್ದರೇ ಯುವಕನನ್ನು ಉಳಿಸ ಬಹುದಿತ್ತು ಎಂಬ ಮಾತುಗಳು ಗ್ರಾಮದಲ್ಲಿ ಕೇಳಿ ಬರುತ್ತಿದ್ದು, ಆರೋಗ್ಯ ಇಲಾಖೆಯ ವಿರುದ್ಧ ಸ್ಥಳೀಯ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ…..
-ಸಚಿನ್ ಶೆಟ್ಟಿ , ಚಿಕ್ಕಮಗಳೂರು