ಚಿಕ್ಕಮಗಳೂರು : ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಆಗುತ್ತಿರುವ ಹಿನ್ನಲೆ, ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಶಾರದ ಪೀಠದ ವತಿಯಿಂದಾ ಮೃತ್ತಿಕೆಯನ್ನು ಹಸ್ತಾಂತರ ಮಾಡಲಾಗಿದೆ. ಅಯೋಧ್ಯೆಯಲ್ಲಿ ಟ್ರಸ್ಟ್ ವತಿಯಿಂದಾ ನಿರ್ಮಾಣಗೊಳ್ಳುತ್ತಿರುವ ಶ್ರೀರಾಮ ಮಂದಿರದ ಶಂಕು ಸ್ಥಾಪನೆ ಆಗಸ್ಟ್ 5 ರಂದು ಪ್ರಧಾನಿ ನರೇಂದ್ರ ಮೋದಿ ಅವರು ನೆರವೇರಿಸಲಿದ್ದು,ದೇಶದ ವಿವಿಧ ಪುಣ್ಯ ಸ್ಥಳಗಳಿಂದಾ ಹಾಗೂ ಪುಣ್ಯ ನದಿಗಳಿಂದಾ ಮೃತ್ತಿಕೆ ಹಾಗೂ ಜಲ ಸಂಗ್ರಹಿಸಲಾಗುತ್ತಿದೆ. ಈ ಹಿನ್ನಲೆ ಹಿಂದೂ ಪರ ಸಂಘಟನೆಯ ಕಾರ್ಯಕರ್ತರು ಮಠಕ್ಕೆ ವಿನಂತಿಸಿಕೊಂಡ ಹಿನ್ನಲೆ,ಶೃಂಗೇರಿಯ ಜಗದ್ಗುರು ಶ್ರೀ ಭಾರತೀ ತೀರ್ಥ ಸ್ವಾಮೀಜಿ ಹಾಗೂ ಶ್ರೀ ವಿಧುಶೇಖರ ಭಾರತೀ ತೀರ್ಥ ಸ್ವಾಮೀಜಿಗಳ ಆಶೀರ್ವಾದದಿಂದ ಮಠದ ಮೃತ್ತಿಕೆ ಹಾಗೂ ಪುಣ್ಯ ತೀರ್ಥವನ್ನು ಭಜರಂಗದಳದ ಕಾರ್ಯಕರ್ತರ ಮೂಲಕ ಆಯೋಧ್ಯೆಯಲ್ಲಿ ನಿರ್ಮಾಣ ಆಗುತ್ತಿರುವ ಶ್ರೀರಾಮ ಮಂದಿರಕ್ಕೆ ಕಳುಹಿಸಿಕೊಟ್ಟು ಶುಭ ಹಾರೈಸಿ ಆಶೀರ್ವಾದ ಮಾಡಿದ್ದಾರೆ….
ಸಚಿನ್ ಶೆಟ್ಟಿ ಚಿಕ್ಕಮಗಳೂರು…