Saturday, January 18, 2025

ಕಾರ್ಗಿಲ್ ರೋಚಕ‌ ಕ್ಷಣಗಳನ್ನು ಮೆಲುಕು ಹಾಕಿದ ಮಾಜಿ ಯೋಧ..!

ದಾವಣಗೆರೆ; ಪಾಕಿಸ್ತಾನದ್ದು ಮನುಷ್ಯತ್ವ ಇಲ್ಲದ ನರಕ ಆರ್ಮಿ, ನಮ್ಮವರನ್ನು‌ಮೋಸದಿಂದ ಕೊಂದಿದ್ದಕ್ಕಾಗಿ ಕಾರ್ಗಿಲ್ ಯುದ್ದ ನಡೆಯುವಂತಾಯಿತ್ತು.. ಹೀಗಾಗಿ ಶತ್ರುಗಳನ್ನು‌ ಹಿಮ್ಮೆಟಿಸುವುದೇ ನಮ್ಮ ಮುಖ್ಯ ಗುರಿಯಾಗಿತ್ತು ಎಂದು ದಾವಣಗೆರೆ ತಾಲ್ಲೂಕಿನ ಎಲೆಬೇತೂರು ಬಸಪ್ಪ ರೋಚಕ ಕ್ಷಣಗಳನ್ನು ಪವರ್ ಟಿವಿ ಜೊತೆ ಹಂಚಿಕೊಂಡಿದ್ದಾರೆ..

ಇಂದು ಕಾರ್ಗಿಲ್ ವಿಜಯೋತ್ಸವ ದಿನ, ಈ ಹಿನ್ನಲೆ
ಕಾರ್ಗಿಲ್ ಯುದ್ದದಲ್ಲಿ ಭಾಗವಹಿಸಿದ್ದ ದಾವಣಗೆರೆಯ ಯೋಧ ಎಲೆಬೇತೂರು ಬಸಪ್ಪ, ದಾವಣಗೆರೆಯಲ್ಲಿ ಪವರ್ ಟಿವಿಗೆ ಯುದ್ದದ ರೋಚಕ ಕ್ಷಣಗಳನ್ನು ಹಂಚಿಕೊಂಡಿದ್ದಾರೆ, ಅಕಸ್ಮಾತ್ ಆದ ದೊಡ್ಡ ಘಟನೆ ಕಾರ್ಗಿಲ್ ಯುದ್ದ.. ಅನ್ ಪ್ಲಾನಿಂಗ್ ವಾರ್ ಕಾರ್ಗಿಲ್, ಕಠಿಣ ಪ್ರದೇಶವಾದ ಹಿಮ ಪ್ರದೇಶದಲ್ಲಿ ಯುದ್ದ ಸುಲಭದ ಮಾತಾಗಿರಲಿಲ್ಲ.. ಪಾಕಿಸ್ತಾನ ಸೈನಿಕರು ನಮ್ಮ ಸೈನಿಕರನ್ನು ಮೋಸದಿಂದ ಕೊಂದಿದ್ದರು, ಹೀಗಾಗಿ ಯುದ್ದ ಮಾಡಬೇಕಾದ ಅನಿವಾರ್ಯತೆ ಬಂತು.. ಪಾಕಿಸ್ತಾನದ್ದು ಮನುಷ್ಯತ್ವ ಇಲ್ಲದ ನರಕ ಆರ್ಮಿ ಹೀಗಾಗಿ
ಶತ್ರುಗಳನ್ನು‌ ಹಿಮ್ಮೆಟಿಸುವುದೇ ನಮ್ಮ ಗುರಿಯಾಗಿತ್ತು, ಅಂದು ಪ್ರಧಾನಿ ವಾಜಪೇಯಿ ಹಾಗೂ ಜಾರ್ಜ್ ಫರ್ನಾಂಡೀಸ್ ಅವರುಗಳು ನಮ್ಮ ಬ್ಯಾಟಾಲಿಯನ್ ಬಂದಿದ್ದರು, ಪಾಕಿಸ್ತಾನಿಯರು ಒಂದು ಗುಂಡು ಹೊಡೆದರೆ ನೀವು ಎರಡು ಗುಂಡು ಹೊಡೆಯಿರಿ ಎಂದು ಧೈರ್ಯದ ಮಾತುಗಳನ್ನು ಹಾಡಿ ಹೋಗಿದ್ದರು ಎಂದು ರೋಚಕ ಕ್ಷಣಗಳನ್ನು ತಿಳಿಸಿದ್ದಾರೆ…

ಯುದ್ದದ ಬಳಿಕ
ಕೊನೆಯಲ್ಲಿ ವಿಜಯ ಸಾಧಿಸಿದೆವು, ಅತೀ ಎತ್ತರದ ಪ್ರದೇಶದಲ್ಲಿ ಹೋಗಿ ನಮ್ಮ ಕರ್ನಲ್ ರವೀಂದ್ರನಾಥ್ ಅವರು ಸೇರಿದಂತೆ ಹಲವರು ಭಾರತ ಭಾವುಟ ನೆಟ್ಟಿದ್ದರು, ಧೈರ್ಯ, ಸ್ಥೈರ್ಯ, ದೇಶಪ್ರೇಮದಿಂದ ಕಾರ್ಗಿಲ್ ಗೆದ್ದೆವು, ಕಾರ್ಗಿಲ್ ವಿಜಯ ನಮಗೆ ತುಂಬಾ ಸಂತೋಷ ತಂದಿತ್ತು. ಅಂದು ನಾವೆಲ್ಲ ಕುಣಿದು ಕುಪ್ಪಳಿಸಿದ್ದೆವು ಎಂದು
ಯುದ್ದದ ರೋಚಕ ಸನ್ನಿವೇಶಗಳನ್ನು ನಿವೃತ್ತ ಯೋಧ ಬಸಪ್ಪ ತಿಳಿಸಿದ್ದಾರೆ..

RELATED ARTICLES

Related Articles

TRENDING ARTICLES