ಕೊಪ್ಪಳ : ಕೊರೊನಾ ಜಾಗೃತಿ ಮೂಡಿಸುವದರ ಬಗ್ಗೆ ಒಬ್ಬಬರೂ ಒಂದೊಂದು ರೀತಿಯಲ್ಲಿ ಸುದ್ದಿಯಾಗ್ತಿದ್ದಾರೆ. ಅದರಲ್ಲಿ ಕೊಪ್ಪಳದ ಡಾಕ್ಟರ್ ಸೋಷಿಯಲ್ ಡಿಸ್ಟೆನ್ಸ್ ಐಡಿಯಾ ನೋಡಿದ್ರೆ ನೀವು ಒಂದು ಸಲ ವಾಟ್ ಆ್ಯನ್ ಐಡಿಯಾ ಡಾಕ್ಟ್ರೇ ಅನ್ನದೆ ಇರೋಲ್ಲಾ..
ಎಸ್.. ಇವರು ಡಾಕ್ಟರ್ ಮಧುಸೂದನ್ ಅಂತ ಪಕ್ಕಾ MBBS ಡಾಕ್ಟರ್.. ಕೊಪ್ಪಳದ ಕಾರಟಗಿಯಲ್ಲಿ ಇವರದು ಜಯಂತ್ ಎಂಬ ಒಂದು ಕ್ಲಿನಿಕ್ ಇದೆ. ದಿನ ನಿತ್ಯ ಇದೇ ಕ್ಲಿನಿಕ್ ಅಲ್ಲಿ ಇವರು ರೋಗಿಗಳಿಗೆ ಚಿಕಿತ್ಸೆ ನೀಡ್ತಾರೆ. ಆದ್ರೆ ಇದೀಗ ಕೊರೊನಾ ಸಮಯ ಅದರಲ್ಲಿ ಡಾಕ್ಟರ್ ಆದವರು ರೋಗಿಗಳಿಗೆ ಚಿಕಿತ್ಸೆ ನೀಡುವಾಗ ತುಂಬಾನೆ ಜಾಗೃತವಾಗಿರಬೇಕು. ಡಾಕ್ಟರ್ ಮಧುಸೂದನ್ ಇದರಲ್ಲಿ ಒಂದು ಸ್ಟೇಪ್ ಮೇಲೇನೆ. ಹೌದು ಚಿಕಿತ್ಸೆಗೆ ಎಂದು ಬರುವ ರೋಗಿಗಳಿಗೆ ಡಾಕ್ಟರ್ ವಿಭಿನ್ನ ರೀತಿಯ ಸೋಷಿಯಲ್ ಡಿಸ್ಟೆನ್ಸ್ ಮೆಂಟನ್ ಮಾಡಿದ್ದಾರೆ.. ಸುಮಾರು ಮೂರು ಮೀಟರ್ ದೂರದಿಂದ ಸ್ಟೆತಾಸ್ಕೋಪ್ ಹಾಕಿ ರೋಗಿಗಳ ಕೈಯಿಂದಾನೆ ಚೆಕ್ ಅಪ್ ಮಾಡಿಸುತ್ತಾರೆ. ಅಷ್ಟೇ ಅಲ್ಲದೇ ಚಿಕಿತ್ಸೆ ನಂತರ ಅದನ್ನು ಸ್ಯಾನಿಟೈಸ್ ಮುಖಾಂತರ ಸ್ಸ್ಪ್ರೇ ಮಾಡಿ ಅಲ್ಲೂ ಸಹ ಜಾಗೃತಿ ಮೆರೆಯುತ್ತಾರೆ. ಇದೀಗ ಕಾರಟಗಿಯ ಡಾಕ್ಟರ್ ಸೋಷಿಯಲ್ ಡಿಸ್ಟೆನ್ಸ್ ಸ್ಟೈಲ್ ಗೆ.. ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಮೆಚ್ಚುಗೆ ಬರ್ತಿದೆ. ಒಟ್ಟಾರೆ ಕೊರೊನಾ ಜಾಗೃತಿ ಮೂಡಿಸುವ ಸಂಧರ್ಭದಲ್ಲಿ ಇಂತಹ ವಿಭಿನ್ನ ಆಲೋಚನೆಗಳು ನಾವು ನೊಡ್ತಿದ್ದಿವಿ ಕೇಲವರು ಎನೋ ಮಾಡಲು ಹೋಗಿ ಎಡವಟ್ಟು ಮಾಡಿಕೊಂಡಿದ್ದು ಇದೆ.. ಇದೀಗ ಇದು ಎಡವಟ್ಟ ಆಗದೆ ಇರಲಿ ಅನ್ನೊದು ನಮ್ಮ ಆಶಯ…