ಇಂಡಿಯನ್ ಪ್ರೀಮಿಯರ್ ಲೀಗ್ (IPl) ದಿನಾಂಕ ಫಿಕ್ಸ್ ಆಗಿದೆ. ಸೆಪ್ಟೆಂಬರ್ 19ರಿಂದ ನವೆಂಬರ್ 8ರವರೆಗೆ 13ನೇ ಆವೃತ್ತಿಯ ಐಪಿಎಲ್ ನಡೆಯಲಿದೆ ಅಂತ ತಿಳಿದುಬಂದಿದೆ.
ಹೌದು, ಕೊರೋನಾ ದೆಸೆಯಿಂದ ಐಪಿಎಲ್ ಟೂರ್ನಿ ಮುಂದೂಡಲ್ಪಟ್ಟಿತ್ತು. ಇದೀಗ ಮತ್ತೆ ಕ್ರಿಕೆಟ್ ಹಬ್ಬಕ್ಕೆ ದಿನಗಣನೆ ಶುರುವಾಗಿದೆ. ಕೊರೋನಾ ಆತಂಕದಿಂದಾಗಿ ಈ ವರ್ಷ ಟಿ20 ವರ್ಲ್ಡ್ಕಪ್ ಅನ್ನು ನಡೆಸದಿರಲು ಐಸಿಸಿ ನಿರ್ಧರಿಸಿದೆ. ಈ ಸುದ್ದಿ ಹೊರಬರುತ್ತಿದ್ದಂತೆ ಬಿಸಿಸಿಐ ವರ್ಲ್ಡ್ಕಪ್ ನಿಗದಿಯಾಗಿದ್ದ ಟೈಮ್ನಲ್ಲಿ ಐಪಿಎಲ್ ನಡೆಸೋ ಚಿಂತನೆ ಮಾಡಿತ್ತು.
ಇದೀಗ ಹೆಚ್ಚುಕಮ್ಮಿ ಒಂದು ತಿಂಗಳ ಮೊದಲೇ ಟೂರ್ನಿ ನಡೆಯಲಿದೆ. ಸದ್ಯ ಸೆಪ್ಟೆಂಬರ್ 19ರಿಂದ ನವೆಂಬರ್ 8ರವರೆಗೆ ಐಪಿಎಲ್ ನಡೆಯಲಿದೆ. ಈ ಬಗ್ಗೆ ಬಿಸಿಸಿಐ ಇದುವರೆಗೆ ಯಾವ್ದೇ ಅಧಿಕೃತ ಮಾಹಿತಿ ನೀಡಿಲ್ಲ. ಬಿಸಿಸಿಐ ಮೂಲಗಳು ಈ ದಿನಾಂಕವನ್ನು ತಿಳಿಸಿದ್ದು, ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ ಕೊಟ್ಟ ಬಳಿಕ ಬಿಸಿಸಿಐ ಅಂತಿಮ ವೇಳಾಪಟ್ಟಿಯನ್ನು ಪ್ರಕಟಿಸಲಿದೆ ಎಂದು ಪ್ರತಿಷ್ಠಿತ ನ್ಯೂಸ್ ಏಜೆನ್ಸಿ ಪಿಟಿಐ ವರದಿ ಮಾಡಿದೆ.
ಇನ್ನು ಯುಇಎ ಸರ್ಕಾರ ತಮ್ಮಲ್ಲಿ ಐಪಿಎಲ್ ನಡೆಸಲು ಅವಕಾಶ ನೀಡುವುದಾಗಿ ಹೇಳಿದೆ. ಅಲ್ಲಿನ ಸೌಲಭ್ಯಗಳು ಮತ್ತು ಪರಿಸ್ಥಿತಿ ಬಗ್ಗೆ ಅವಲೋಕಿಸ್ತಿದ್ದೇವೆ. ವಾರದೊಳಗೆ ಐಪಿಎಲ್ ಗವರ್ನಿಂಗ್ ಕೌನ್ಸಿಲ್ ಸಭೆ ಸೇರಿ ಮುಂದಿನ ಐಪಿಎಲ್ ಟೂರ್ನಿ ಬಗ್ಗೆ ಚರ್ಚೆ ನಡೆಸಲಿದೆ ಅಂತ ಈಗಾಗಲೇ ಐಪಿಎಲ್ ಅಧ್ಯಕ್ಷ ಬ್ರಿಜೇಶ್ ಪಾಟೀಲ್ ತಿಳಿಸಿದ್ದಾರೆ.