ವಿಜಯಪುರ : ಭೀಮಾ ತೀರದ ಹಂತಕ ಮಹಾದೇವ ಸಾಹುಕಾರ್ ಭೈರಗೊಂಡ ಹುಟ್ಟು ಹಬ್ಬದ ದಿನವೇ ಕೃಷ್ಣ ಜನ್ಮಸ್ಥಳಕ್ಕೆ ಸೇರಿದ್ದಾನೆ. ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದ ನಿವಾಸಿ ಚಿನ್ನದ ವ್ಯಾಪಾರಿ ನಾಮದೇವ್ ಡಾಂಗೆ ಎಂಬುವವರಿಗೆ ಜೀವ ಬೆದರಿಕೆ ಹಾಕಿ ಹಣಕ್ಕೆ ಬೇಡಿಕೆ ಇಟ್ಟಿದ್ದ. ದುಷ್ಕರ್ಮಿಗಳು ಐದು ಕೋಟಿ ರೂಪಾಯಿ ಹಣ ಅಥವಾ 3 ಕೆಜಿ ಚಿನ್ನವನ್ನು ನೀಡದಿದ್ದರೆ ನಿನ್ನನ್ನು ಉಳಿಸುವುದಿಲ್ಲಾ ಎಂದು ಜೀವ ಬೆದರಿಕೆ ಹಾಕಿದ್ದಾರೆ ಎಂದು ಚಿನ್ನದ ವ್ಯಾಪಾರಿ ನಾಮದೇವ ಡಾಂಗೆ ಚಡಚಣ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನನ್ವಯ ಚಡಚಣ ಠಾಣೆಯಲ್ಲಿ ಮೂರು ಜನರ ಮೇಲೆ ಐಪಿಸಿ ಸೆಕ್ಷನ್ 384, 511, 504, 506 ಅಡಿ ದೂರು ದಾಖಲಿಸಿಕೊಂಡು ಮಹಾದೇವ ಸಾಹುಕಾರ್ ಭೈರಗೊಂಡನನ್ನ ಪೋಲಿಸರು ಬಂಧಿಸಲಾಗಿದ್ದು, ಪರಾರಿಯಾಗಿರುವ ಇನ್ನಿಬ್ನರು ಆರೋಪಿಗಳ ಪತ್ತೆಗೆ ಪೋಲಿಸರು ಬಲೆ ಬೀಸಿದ್ದಾರೆ..