Friday, January 17, 2025

ಅಕ್ರಮ ಗೋ ಸಾಗಾಣಿಕೆ ತಡೆಗಟ್ಟುವಂತೆ ಮನವಿ ಸಲ್ಲಿಸಿದ ಭಾರತೀಯ ಯುವ ಪಡೆ..!

ರಾಮನಗರ : ಅಕ್ರಮ ಗೋ ಸಾಗಾಣಿಕೆ ತಡೆಗಟ್ಟುವಂತೆ ಭಾರತೀಯ ಯುವ ಪಡೆ ಕಾರ್ಯಕರ್ತರು ರಾಮನಗರ ಅಪರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ರಾಜ್ಯದಲ್ಲಿ ಕರ್ನಾಟಕ ಪ್ರಾಣಿ ಬಲಿ ನಿಷೇಧ ಕಾಯ್ದೆ ತಿದ್ದುಪಡಿ ಜಾರಿಯಲ್ಲಿದ್ದು ಅದರ ಅನ್ವಯ ಯಾವುದೇ ಪ್ರಾಣಿಗಳನ್ನು ಯಾವುದೇ ಧರ್ಮದವರು ಬಲಿ ಕೊಡುವುದಕ್ಕೆ ನಿಷೇದವಿದೆ. ಆದರೂ ಕೂಡ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಪ್ರತಿನಿತ್ಯ ಅಕ್ರಮವಾಗಿ ಆಟೋ ದ್ವಿಚಕ್ರ ವಾಹನಗಳಲ್ಲಿ ಹಸು, ಕರುಗಳನ್ನು ಸಾಗಿಸುತ್ತಿದ್ದು, ಅವರ ವಿರುದ್ದ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಇದೀಗ ಬಕ್ರಿದ್ ಹಬ್ಬ ಹತ್ತಿರ ಬರುತ್ತಿದ್ದು ಅಕ್ರಮವಾಗಿ ಹಸು, ಒಂಟೆಗಳನ್ನು ಸಾಗಿಸಿ ಬಲಿ ಕೊಡಲು ಮುಂದಾಗುತ್ತಿದ್ದು ಇದರ ವಿರುದ್ದ ಕ್ರಮ ಕೈಗೊಳ್ಳುವಂತೆ ಭಾರತೀಯ ಯುವ ಪಡೆಯ ಅಧ್ಯಕ್ಷ ಧನುಷ್ ನೇತೃತ್ವದಲ್ಲಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು..

RELATED ARTICLES

Related Articles

TRENDING ARTICLES