Friday, January 17, 2025

ಕಾಮೇಗೌಡರಿಗೂ ಕೊರೋನಾ ಪಾಸಿಟಿವ್ | ಅವರ ಮನೆ ರಸ್ತೆ ಸೀಲ್ ಡೌನ್

ಮಂಡ್ಯ : ಮಳವಳ್ಳಿ ತಾಲೂಕಿನ ದಾಸನದೊಡ್ಡಿ ಕಾಮೇಗೌಡರಿಗೂ ಕೊರೋನಾ ಪಾಸಿಟಿವ್ ದೃಢಪಟ್ಟಿದ್ದು, ಅವರ ಸಂಪರ್ಕದಲ್ಲಿದ್ದವರಿಗೆ ಆತಂಕ ಶುರುವಾಗಿದೆ.
ಕಾಮೇಗೌಡರಿಗೆ ಇತ್ತೀಚೆಗೆ ಕಾಲು ಗಾಯವಾಗಿದ್ದು, ಅವರ ಮನೆಗೆ ಜಿಲ್ಲಾ ಆರೋಗ್ಯಾಧಿಕಾರಿ, ತಾಲೂಕು ವೈದ್ಯಾಧಿಕಾರಿ, ತಹಸೀಲ್ದಾರ್, ತಾ.ಪಂ. ಮುಖ್ಯಾಧಿಕಾರಿ ಭೇಟಿ ನೀಡಿದ್ದರು. ಜತೆಗೆ ತುರ್ತು ಚಿಕಿತ್ಸಾ ವಾಹನದಲ್ಲಿ ಮಂಡ್ಯ ಮಿಮ್ಸ್ ಗೆ ಕರೆತಂದು ಚಿಕಿತ್ಸೆ ನೀಡಿ, ಮರಳಿ ಮನೆಗೆ ಬಿಡಲಾಗುತ್ತಿತ್ತು. ಹಾಗಾಗಿ ಯಾರ ಸಂಪರ್ಕದಿಂದ ಸೋಂಕು ಬಂದಿದೆ ಎಂಬುದನ್ನು ಹೇಳಲಾಗುತ್ತಿಲ್ಲ.
ಕಾಮೇಗೌಡರು ಕೆರೆ ಕಟ್ಟಿದ್ದಾರೆ ಎಂದು ಕೆಲವರು ಹೇಳಿದ್ದರಿಂದ ರಾಜ್ಯೋತ್ಸವ ಪ್ರಶಸ್ತಿ, ಬಸವ ಶ್ರೀ ಪ್ರಶಸ್ತಿ ಜತೆಗೆ ಹಲವು ಪ್ರಶಸ್ತಿಗಳು ಸಿಕ್ಕಿವೆ. ಇತ್ತೀಚೆಗೆ ಮನ್ ಕೀ ಬಾತ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರಶಂಸಿದ್ದರು.
ಆ ಬಳಿಕ ಗ್ರಾಮಸ್ಥರು ಕಾಮೇಗೌಡ ಕೆರೆ ಕಟ್ಟಿಲ್ಲ, ಕಟ್ಟೆಗಳನ್ನು ಕೆರೆ ಎಂದು ಬಿಂಬಿಸಲಾಗಿದೆ. ಪ್ರಧಾನಿ ಹೊಗಳಿದ ನಂತರ ಕಾಮೇಗೌಡರು ಗ್ರಾಮಸ್ಥರಿಗೆ ಅನಗತ್ಯ ಕಿರುಕುಳ ನೀಡುತ್ತಿದ್ದಾರೆ ಎಂದು ಆಪಾದಿಸಿದ ನಂತರ ಉಪವಿಭಾಗಾಧಿಕಾರಿ ನೇತೃತ್ವದಲ್ಲಿ ಶಾಂತಿ ಸಭೆ ನಡೆಸಲಾಗಿತ್ತು.
ಕಾಮೇಗೌಡರ ಸಾಧನೆಯ ಬಗ್ಗೆ ಪರಿಶೀಲನೆಗೆ ತಂಡ ರಚಿಸುವ ಭರವಸೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.
ಇನ್ನು ಕಾಮೇಗೌಡರಿಗೆ ಕೊರೋನಾ ದೃಢಪಡುತ್ತಿದ್ದಂತೆ ಅವರು ವಾಸವಿದ್ದ ದಾಸನದೊಡ್ಡಿ ಮನೆಯ ರಸ್ತೆಯನ್ನ ಸೀಲ್ ಡೌನ್ ಮಾಡಲಾಗಿದೆ.

RELATED ARTICLES

Related Articles

TRENDING ARTICLES