Friday, January 17, 2025

ಅನೈತಿಕ ಸಂಬಂಧ ಆರೋಪ ; ಇಬ್ಬರ ಬರ್ಬರ ಹತ್ಯೆ

ವಿಜಯಪುರ : ಅನೈತಿಕ ಸಂಬಂಧ ಹೊಂದಿದ್ದರೆಂದು ಯುವಕ ಮತ್ತು ಮಹಿಳೆಯ ಬರ್ಬರ ಹತ್ಯೆ ನಡೆದಿದೆ.  ಜಿಲ್ಲೆಯ ವಿಜಯಪುರ ತಾಲ್ಲೂಕಿನ  ಅಲಿಯಾಬಾದ್​ ಗ್ರಾಮದ ತೋಟದ ಮನೆ ಬಳಿ ಘಟನೆ ನಡೆದಿದ್ದು, ಅಮರನಾಥ ಸೊಲ್ಲಾಪುರ (25) ಮತ್ತು ಸುನೀತಾ ತಳವಾರ (35) ಕೊಲೆಯಾದವರು. ಸುನೀತಾಳ ಅಪ್ರಾಪ್ತ ಮಗ ಮತ್ತು ತಂದೆ ರಾಮಗೊಂಡ ಆರೋಪಿಗಳು.

ವಿವಾಹಿತೆ ಸುನೀತಾ ಅಮರನಾಥನೊಂದಿಗೆ ಅಕ್ರಮಸಂಬಂಧ ಹೊಂದಿದ್ದಳು ಎನ್ನಲಾಗಿದ್ದು, ಮಂಗಳವಾರ ಮಧ್ಯರಾತ್ರಿ ಅಲಿಯಾಬಾದ್​ ಗ್ರಾಮದ ತೋಟದ ಮನೆಯಲ್ಲಿ ರಾಮಗೊಂಡ ಮತ್ತು ಮೊಮ್ಮಗ (ಸುನೀತಾಳ ಮಗ) ಸೇರಿ ಕೊಡಲಿಯಿಂದ ಕೊಚ್ಚಿ ಕೊಲೈಗೆದಿದ್ದಾರೆ ಎಂದು ತಿಳಿದುಬಂದಿದೆ. ಸ್ಥಳಕ್ಕೆ ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯ ಇನ್ಸ್​ಪೆಕ್ಟರ್​ ಮಹಾಂತೇಶ್ ದಾಮಣ್ಣವರ ಮತ್ತು ಅಧಿಕಾರಿಗಳು ಭೇಟಿ ನೀಡಿದ್ದು, ತನಿಖೆ ನಡೆಸುತ್ತಿದ್ದಾರೆ. ಗ್ರಾ,ಮೀಣ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

Related Articles

TRENDING ARTICLES