ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕಳೆದ 5ದಿನಗಳಿಂದ ಕೊರೊನಾ ಸೋಂಕಿತರ ಸಂಖ್ಯೆ ಮೂವತ್ತಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿತ್ತು ಜಿಲ್ಲೆಯ ಜನ ಆತಂಕಕ್ಕೀಡಾಗಿದ್ದಾರೆ. ಇಂದು ಒಂದೇ ದಿನ 68 ಕರೋನ ಪಾಸಿಟಿವ್ ಕೇಸ್ ಪತ್ತೆಯಾಗಿದ್ದು ಜಿಲ್ಲೆಯ ಜನ ಮತ್ತಷ್ಟು ದಿಗ್ಭ್ರಾಂತರಾಗಿದ್ದಾರೆ. ಇಂದಿನ 68 ಕೇಸ್ ಗಳ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 402ಕ್ಕೆ ಏರಿದೆ. ದಿನದಿಂದ ದಿನಕ್ಕೆ ಕರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು ಜಿಲ್ಲೆಯ ಜನ ಕಂಗಾಲಾಗಿದ್ದಾರೆ. ಇಂದು ಕೂಡ ಚಿಕ್ಕಮಗಳೂರಿನಲ್ಲಿ 17, ಕಡೂರು18, ಶೃಂಗೇರಿ 8, ಕೊಪ್ಪ 7, ಮೂಡಿಗೆರೆ 6, ಎನ್.ಆರ್.ಪುರ 7, ಅಜ್ಜಂಪುರ 3, ತರೀಕೆರೆಯಲ್ಲಿ 2 ಪ್ರಕರಣ ಪತ್ತೆಯಾಗಿದ್ದು ಜಿಲ್ಲೆಯ ಜನ ತಲೆ ಮೇಲೆ ಕೈ ಹೊದ್ದು ಕೂರುವ ಸ್ಥಿತಿ ನಿರ್ಮಾಣವಾಗಿದೆ. ಅದರಲ್ಲೂ ಪ್ರಮುಖವಾಗಿ ಕಳೆದ ಆರು ದಿನಗಳಲ್ಲಿ ಜಿಲ್ಲೆಯಲ್ಲಿ 234 ಪ್ರಕರಣಗಳು ಪತ್ತೆಯಾಗಿವೆ. ಕರುನಾ ಆರಂಭದ ಮೊದಲ 55 ದಿನಗಳ ಕಾಲ ಜಿಲ್ಲೆಯಲ್ಲಿ ಒಂದೇ ಒಂದು ಕರೋನ ಪಾಸಿಟಿವ್ ಇರಲಿಲ್ಲ. ಮೇ 19 ರಿಂದ ಆರಂಭವಾದ ಸೋಂಕಿತರ ಸಂಖ್ಯೆ ಜುಲೈ 15ನೇ ತಾರೀಖಿನವರೆಗೆ ಕೇವಲ ನೂರ ಅರವತ್ತೆಂಟು ಪ್ರಕರಣಗಳು ಪತ್ತೆಯಾಗಿದ್ದವು. ಆದರೆ ಜುಲೈ16 ಬಳಿಕ ಆರ್ಯ ದಿನಕ್ಕೆ 234 ಪ್ರಕರಣಗಳು ಪತ್ತೆಯಾಗಿರುವುದು ಜಿಲ್ಲೆಯ ಜನರನ್ನು ಕಂಗೆಡಿಸಿದೆ. 234 ಪ್ರಕರಣಗಳಲ್ಲಿ ಸುಮಾರು 50 ರಿಂದ 60 ಪ್ರಕಣರಗಳಿಗೆ ಟ್ರಾವೆಲ್ಸ್ ಹಿಸ್ಟ್ರಿ ಇಲ್ಲ. ಶೀಥ, ಕೆಮ್ಮು, ಜ್ವರ ಅಂತ ಆಸ್ಪತ್ರೆಗೆ ಹೋದವರಿಗೆ ಕರೋನಾ ಪಾಸಿಟಿವ್ ಬಂದಿರುವುದು ಜಿಲ್ಲೆಯ ಜನರಿಗೆ ಕರೋನಾ ಸಮುದಾಯಕ್ಕೆ ಹರಡಿದ್ಯಾ ಎಂಬ ಹನುಮಾನ ಮೂಡುವುದರ ಜೊತೆ ಆತಂಕ ಕೂಡ ಎದುರಾಗಿದೆ…
ಸಚಿನ್ ಶೆಟ್ಟಿ ಚಿಕ್ಕಮಗಳೂರು…