ಇನ್ನು ೫ ದಿನಗಳಲ್ಲಿ ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿರಿಸಬೇಕಿದ್ದ ಮದುಮಗ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮೈಸೂರಿನ ವರುಣಾದಲ್ಲಿ ನಡೆದಿದೆ.ಇದೇ ಭಾನುವಾರ ಜುಲೈ ೨೬ ರಂದು ದಾಂಪತ್ಯ ಜೀವನಕ್ಕೆ ಕಾಲಿರಿಸಬೇಕಿದ್ದ ಮದುಮಗ ಡೆತ್ ನೋಟ್ ಬರೆದು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಮಂಚೇಗೌಡ(೩೪) ಆತ್ಮಹತ್ಯೆಗೆ ಶರಣಾದ ದುರ್ದೈವಿ ಮೈಸೂರು-ಟಿ.ನರಸೀಪುರ ಮುಖ್ಯ ರಸ್ತೆಯಲ್ಲಿರುವ ವರುಣಾ ಕೆರೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಣ್ಣಾರಿ ಅಮ್ಮನ್ ಶುಗರ್ ಫ್ಯಾಕ್ಟರಿಯಲ್ಲಿ ಫೀಲ್ಡ್ ಆಫೀಸರ್ ಆಗಿರುವ ಮಂಜೇಗೌಡ ಮದುವೆಗೆ ಸಿದ್ದತೆ ಮಾಡಿಕೊಂಡಿದ್ದರು. ತೀವ್ರ ಬೆನ್ನುನೋವಿನಿಂದ ಬಳಲುತ್ತಿದ್ದ ಮಂಚೇಗೌಡ ಮಾನಸಿಕವಾಗಿ ಜರ್ಜರಿತರಾಗಿದ್ದರೆಂದು ಹೇಳಲಾಗಿದೆ.ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಮುತ್ತಣ್ಣ ಹಳ್ಳಿ ನಿವಾಸಿಯಾಗಿರುವ ಮಂಚೇಗೌಡ ಎರಡು ತಿಂಗಳ ಹಿಂದೆ ಪಕ್ಕದ ಊರಿನ ಯುವತಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ನಿಶ್ಚಿತಾರ್ಥ ಮುಗಿಸಿ ಮದುವೆಗೆ ಸಿದ್ದತೆ ನಡೆಸುತ್ತಿದ್ದ ಮಂಚೇಗೌಡ ವರುಣಾ ದ ವಾಜಮಂಗಲದಲ್ಲಿ ಕೊಠಡಿ ಬಾಡಿಗೆ ಪಡೆದು ತಂಗಿದ್ದರು.
ನಿಶ್ಚಿತಾರ್ಥಕ್ಕೂ ಮೊದಲೇ ಬೆನ್ನು ನೋವು ಇಷ್ಟು ಕಾಡಿದ್ದರೆ ನಿಶ್ಚಿತಾರ್ಥ ಮಾಡಿಕೊಳ್ಳುತ್ತಿರಲಿಲ್ಲ ಆ ಹುಡುಗಿಯನ್ನ ಮುಟ್ಟಿಲ್ಲ ಯಾರೂ ತಪ್ಪು ತಿಳಿಯಬೇಡಿ ನನ್ನ ಸಾವಿಗೆ ನಾನೇ ಕಾರಣ ಎಂದು
ಡೆತ್ ನೋಟ್ ಬರೆದಿರುವ ಮಂಚೇಗೌಡ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ವರುಣಾ ಪೊಲೀಸರಿಂದ ಮೃತದೇಹಕ್ಕಾಗಿ ಶೋಧನೆ ನಡೆಯುತ್ತಿದೆ.ಡೆತ್ ನೋಟ್ ನ್ನು ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ಮುಂದುವರೆಸುತ್ತಿದ್ದಾರೆ.
ಹಸೆಮಣೆ ಏರಬೇಕಾದ ಮದುಮಗ ಮಸಣಕ್ಕೆ…ಡೆತ್ ನೋಟ್ ಬರೆದು ಆತ್ಮಹತ್ಯೆ
TRENDING ARTICLES