Friday, January 17, 2025

ಆನೆ ನಡೆದದ್ದೆ ದಾರಿ | ಕಬ್ಬಿಣದ ತಡೆಗೋಡೆ ಲೆಕ್ಕಕ್ಕಿಲ್ಲ ಈ ಗಜರಾಜನಿಗೆ

ಮೈಸೂರು : ಕಾಡಂಚಿನಲ್ಲಿ ವಾಸಿಸುವ ಜನರಿಗೆ ಕಾಡಾನೆಗಳ ಹಾವಳಿ ಬಹು ದೊಡ್ಡ ಸಮಸ್ಯೆ. ಆನೆಗಳ ಹಾವಳಿ ತಡೆಗಟ್ಟಲು ಅರಣ್ಯ ಪ್ರದೇಶದ ಕೆಲವು ಸ್ಥಳಗಳಲ್ಲಿ ತಡೆಗೋಡೆ ನಿರ್ಮಿಸಲಾಗಿದೆ. ಆದರೆ ಒಂಟಿ ಸಲಗವೊಂದು ಹೇಗೋ ತಡೆಗೋಡೆ ನಡುವೆ ಇರುವ ಜಮೀನಿಗೆ ನುಗ್ಗಿ ಬೆಳೆ ನಾಶಮಾಡಿದೆ. ವಾಪಸ್ ಕಾಡಿನತ್ತ ತೆರಳಲು ತಡೆಗೋಡೆ ಅಡ್ಡಿಯಾಗಿದೆ. ತನ್ನ ದಾರಿಗೆ ಅಡ್ಡಬಂದ ಕಬ್ಬಿಣದ ತಡೆಗೋಡೆಯನ್ನ ಪುಡಿಮಾಡಲು ಯತ್ನಿಸಿದೆ. ಅರಣ್ಯ ಇಲಾಖೆ ಸಿಬ್ಬಂದಿಗಳ ಮುಂದೆಯೇ ಒಂಟಿ ಸಲಗ ತನ್ನ ಹಾದಿ ಹಿಡಿಯಲು ಪ್ರಯತ್ನಿಸಿ ಆಕ್ರೋಷ ವ್ಯಕ್ತಪಡಿಸಿದೆ. ದಾರಿ ಇಲ್ಲದಿದ್ರೂ ದಾರಿ ಮಾಡಿಕೊಂಡ ಗಜರಾಜ ಕಾಡಿನತ್ತ ತೆರಳಲು ಹರಸಾಹಸ ಪಟ್ಟಿದೆ. ಗಜರಾಜನ ಆರ್ಭಟಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಸಹ ಕ್ಷಣಕಾಲ ಬೆಚ್ಚಿದ್ದಾರೆ. ಆನೆಗಳು ಒಳಬಾರದಂತೆ ಅರಣ್ಯ ಇಲಾಖೆ ಕಾಡಂಚಲ್ಲಿ ನಿರ್ಮಿಸಿರುವ ರೈಲ್ವೆ ಕಂಬಿ ತಡೆಗೋಡೆ ಮೇಲೆ ಆನೆ ಆಕ್ರೋಷ ವ್ಯಕ್ತಪಡಿಸಿದೆ. ಹೆಚ್.ಡಿ ಕೋಟೆ ತಾಲೂಕಿನ ಕಾಟವಾಳು ಗ್ರಾಮದಲ್ಲಿ ಸಿಮೆಂಟ್ ತಡೆಗೋಡೆಯನ್ನ ಮುರಿದು ಹಾಕಿದ ವಿಡಿಯೋ ವೈರಲ್ ಆಗಿದೆ.

RELATED ARTICLES

Related Articles

TRENDING ARTICLES