ಸರ್ಜಾ ಕುಟುಂಬಕ್ಕೆ ಬಿಟ್ಟು ಬಿಡದೆ ಕಾಡ್ತಿದೆ ಕೊರೋನಾ. ಮೊನ್ನೆಯಷ್ಟೆ ದೃವ ಸರ್ಜಾ ಹಾಗೂ ಪತ್ನಿ ಪ್ರೇರಣಾಗೆ ಸೋಂಕು ದೃಢ ಪಟ್ಟಿತ್ತು. ಇದೀಗ ನಟ ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯ ಸರ್ಜಾಗೆ ಕೊರೋನಾ ದೃಢವಾಗಿದೆ.
ತನಗೆ ಸೋಂಕು ದೃಢವಾಗಿರೋದಾಗಿ ತಮ್ಮ ಇನ್ಸ್ಟಾ ಪೇಜ್ ನಲ್ಲಿ ಐಶ್ವರ್ಯ ಸ್ಪಷ್ಟನೆ ನೀಡಿದ್ದಾರೆ.ಸದ್ಯ ಅರ್ಜುನ್ ಸರ್ಜಾ ಕುಟುಂಬ ಚೆನೈನಲ್ಲಿ ವಾಸವಿರುವುದರಿಂದ ಅಲ್ಲೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಸರ್ಜಾ ಕುಟುಂಬದ ಎಲ್ಲಾರು ಕೂಡ ಕೊರೋನಾ ಪರೀಕ್ಷಿಸಿಕೊಂಡಿದ್ದು ಅರ್ಜುನ್ ಸರ್ಜಾ, ಪತ್ನಿ ಆಶಾರಾಣಿ, ಕಿರಿಯ ಪುತ್ರಿ ಅಂಜನಾಗೆ ನೆಗೆಟಿವ್ ಬಂದಿದೆ.