ಮೈಸೂರು : ಮಹಾಮಾರಿ ತಡೆಗಟ್ಟಲು ನಾನಾ ವಿಧಾನಗಳ ಮೊರೆ ಹೋಗಲಾಗುತ್ತಿದೆ. ಇತ್ತೀಚೆಗಷ್ಟೆ ಮೈಸೂರಿನ ರಮ್ಮನಹಳ್ಳಿಯಲ್ಲಿ ಬೇಲಿಕಾಯಿಯನ್ನ ಕೊರಿನಾ ಕಾಯಿ ಎಂದು ಪೂಜೆ ಮಾಡಿ ಮೌಢ್ಯಕ್ಕೆ ಮೊರೆಹೋಗಿದ್ದ ಜನ ಇದೀಗ ರಾಕ್ಷಸೀ ಪೂಜೆ ಮಾಡುವ ಮೂಲಕ ಮೂಢನಂಬಿಕೆಯ ಮೊರೆ ಹೋಗಿದ್ದಾರೆ.ಮೈಸೂರಿನ ಗಾಯಿತ್ರಿಪುರಂ ಜನರು ವಿಶಿಷ್ಟವಾಗಿ ಪೂಜೆ ಸಲ್ಲಿಸಿ ಕೊರೊನಾ ತಡೆಗಟ್ಟಲು ಮುಂದಾಗಿದ್ದಾರೆ.ನಿನ್ನೆ ರಾತ್ರಿರಾಕ್ಷಸಿ ಪೂಜೆ ಮಾಡಿ ರಕ್ತದ ಅನ್ನ ನೈವೇದ್ಯ ಮಾಡಿ ಸಮರ್ಪಿಸಿದ್ದಾರೆ.
ಸ್ಥಳೀಯರೆಲ್ಲರೂ ಒಟ್ಟಾಗಿ ಸೇರಿ ಬೃಹದಾಕಾರದ ರಾಕ್ಷಸಿಯ ಚಿತ್ರ ಬಿಡಿಸಿ ಕೋಳಿ ಬಲಿ ಕೊಟ್ಟಿದ್ದಾರೆ.ಕೋಳಿಯ ರಕ್ತದಿಂದ ಅನ್ನ ಮಾಡಿ ನೈವೇದ್ಯ ನೀಡಿದ್ದಾರೆ.
ರಕ್ತ ಮಿಶ್ರಿತ ಅನ್ನದ ಜೊತೆಗೆ ಬೂದಿ ಮತ್ತು ಅರಿಶಿನ ಮಿಶ್ರಿತ ಅನ್ನ ಅರ್ಪಿಸಿ ಕೊರೊನಾ ನಿರ್ಮೂಲನೆಯಾಗಲಿ ಎಂದು ಪ್ರಾರ್ಥಿಸಿದ್ದಾರೆ. ಇಂದು ಭೀಮನ ಅಮಾವಾಸ್ಯೆ ಹಿನ್ನಲೆ ದೃಶ್ಯ ಕಂಡು ಮಾಹಿತಿ ಅರಿಯದ ದಾರಿಹೋಕರು ಭಯಭೀತರಾಗಿದ್ದಾರೆ. ಕೊರೊನಾ ಸೋಂಕಿನ ತಡೆಗಾಗಿ ಮೂಢನಂಬಿಕೆಗೆ ಜೋತು ಬಿದ್ದಿರುವುದು ವಿಪರ್ಯಾಸವಾಗಿದೆ…
ಕೊರೊನಾ ನಿಯಂತ್ರಣಕ್ಕೆ ರಾಕ್ಷಸೀ ಪೂಜೆ…ಮೌಢ್ಯತೆಗೆ ಮಾರುಹೋದ ಜನ !
TRENDING ARTICLES