ಬಾಗಲಕೋಟೆ : ಲಿಂಬೆ ಬೆಳೆದು ನಷ್ಟಕ್ಕೆ ಸಿಲುಕಿದ್ದಾನೆ ಬಾಗಲಕೋಟೆ ತಾಲ್ಲೂಕಿನ ತುಳಸಿಗೇರಿ ಗ್ರಾಮದ ರೈತ ವೆಂಕಣ್ಣ ಬಾಲರೆಡ್ಡಿ. ತಮ್ಮ ಎರಡು ಎಕರೆ ಜಮೀನಿನಲ್ಲಿ ಲಿಂಬೆ ಹಚ್ಚಿದ ರೈತನಿಗೆ ಕಳೆದ ವರ್ಷ ಲಿಂಬೆ ಲಾಭ ತಂದುಕೊಟ್ಟಿತ್ತು.ಆದ್ರೆ ಈ ವರ್ಷ ಕೊರೋನಾ ಹೊಡೆತದಿಂದ ಲಿಂಬೆಗೆ ಬೆಲೆ ಸಿಗದೆ ನಷ್ಟಕ್ಕೆ ಸಿಲುಕುವಂತೆ ಮಾಡಿದೆ.ಲಿಂಬೆ ಹರಿಯಲು ಹಚ್ಚಿದ ಆಳುಗಳ ಪಗಾರು ಕೂಡ ಬರಿಸುತ್ತಿಲ್ಲ ಲಿಂಬೆ ಮಾರಿದ ಹಣ. ಸಾವೀರ ಲಿಂಬೆಗೆ ಇನ್ನೂರು-ಮುನ್ನೂರು ರೂಪಾತಿಗೆ ಮಾರಾಟ ವಾಗ್ತಿದೆ.
ಇನ್ನು ಕಳೆದ ವರ್ಷ ಶ್ರಾವಣ ಮಾಸ ಆರಂಭದಲ್ಲಿ ಲಿಂಬೆ ಭಾರೀ ಲಾಭ ತಂದಿತ್ತು.ಸಾವಿರ ಲಿಂಬೆಗೆ ೪-೫ ಸಾವಿರ ರೂ ಗಳಿಗೆ ಮಾರಾಟವಾಗಿತ್ತು.ಈ ಭಾರೀ ಸಾವಿರ ಲಿಂಬೆಗೆ ೨ -೩ ನೂರಕ್ಕೂ ಕೆಳ್ತಿಲ್ಲ.ಲಿಂಬೆ ಪಡದಲ್ಲಿ ಲಿಂಬೆ ಹರಿಯಲು ಹಚ್ಚಿದ ಆಳುಗಳ ಪಗಾರು ಕೂಡಾ ಲಿಂಬೆ ಬರಿಸುತ್ತಿಲ್ಲ.ಸ್ವಲ್ಪ ಮನೆಯವರೆ ಹರಿದು ಮಾರಾಟ ಮಾಡ್ತಿದ್ದಾರೆ.ಒಂದಿಷ್ಟು ಹರಿಯಲಿಕ್ಕೆ ಆಗದೆ ಹಾಗೆ ಬಿಟ್ಟಿದ್ದಾರೆ.ಅವು ನೆಲಕ್ಕೆ ಬಿದ್ದು ಕೆಟ್ಟು ಹೊಗ್ತಿವೆ.ಎರಡು ಎಕರೆ ಲಿಂಬೆ ನಂಬಿದ ರೈತ ಕುಟುಂಬ ನಷ್ಟಕ್ಕೆ ಸಿಲುಕಿದೆ.ಕೊರೋನಾ ಮಹಾಮಾರಿಯ ಹೊಡೆತದಿಂದ ಲಿಂಬೆ ಬೆಳೆಗಾರರಿಗೆ ನಷ್ಟ ಉಂಟಾಗಿದ್ದು,ಶ್ರಾವಣ ಮಾಸದಲ್ಲಾದ್ರೂ ಲಿಂಬೆ ಹಣ್ಣಿಗೆ ಬೆಲೆ ಸಿಗುತ್ತಾ ಎಂಬ ಆಶಾವಾದ ದಲ್ಲಿದ್ದಾನೆ ಲಿಂಬೆ ಬೆಳೆದ ರೈತ..