ಮಂಗಳೂರು : ಮಹಾಮಾರಿ ಕೊರೊನಾ ಮಧ್ಯೆಯೂ ಕರಾವಳಿಯಲ್ಲಿ ಆಷಾಢ ಅಮಾವಾಸ್ಯೆ ಆಚರಣೆ ನಡೆದಿದೆ. ಅಮಾವಾಸ್ಯೆ ದಿನ ಕರಾವಳಿ ಭಾಗದಲ್ಲಿ ಹಾಲೆ ಮರದ ರಸ ಸೇವಿಸುವ ಸಂಪ್ರದಾಯವಿದೆ. ಅದ್ರಂತೆ ಇಂದು ಆಟಿ ಅಮಾವಾಸ್ಯೆ ಹಿನ್ನೆಲೆಯಲ್ಲಿ ಕರಾವಳಿ ಜನತೆ ಹೆಚ್ಚಿನ ಉತ್ಸುಕತೆಯಿಂದ ಕಷಾಯ ಸೇವಿಸಿದ್ರು. ಈ ಮೂಲಕ ಕೊರೊನಾಗೂ ರಾಮಬಾಣ ಆಗುವ ನಂಬಿಕೆಯಿಂದ ಈ ಬಾರಿ ಕರಾವಳಿಯಾದ್ಯಂತ ಕಷಾಯವನ್ನ ಸೇವಿಸಿದ್ದಾರೆ. ಇನ್ನು ಕೊರೊನಾದಿಂದಾಗಿ ಈಗಾಗಲೇ ಕರಾವಳಿ ಮಂದಿ ಕಷಾಯ ಮೊರೆ ಹೋಗಿದ್ದರು.
ಅಮೃತ ಬಳ್ಳಿ, ತುಳಸಿ ದಳದ ರಸ ಸೇವನೆ ಮಾಡ್ತಾನೆ ಇದ್ದಾರೆ. ಆದ್ರೆ ವರ್ಷಕ್ಕೊಮ್ಮೆ ಆಟಿ ಅಮಾವಾಸ್ಯೆಯಂದು ಸೇವಿಸುವ ಈ ಹಾಲೆ ಮರ ರಸ ಔಷಧೀಯ ಗುಣ ಹೊಂದಿರುವ ನಂಬಿಕೆಯಿದೆ. ಸೂರ್ಯೋದಯಕ್ಕೂ ಮುನ್ನವೇ ತೊಗಟೆ ರಸ ಸಂಗ್ರಹಮಾಡಿ, ಬಳಿಕ ತೆಂಗಿನಕಾಯಿ ತುರಿ ಗಂಜಿ ಜೊತೆಗೆ ಕಷಾಯ ಸೇವಿಸುವಂತ ಸಂಪ್ರದಾಯ ಕರಾವಳಿಯಲ್ಲಿ ಇಂದಿಗೂ ನಡೀತಾ ಇದೆ. ಇನ್ನು ನಗರ ಪ್ರದೇಶಕ್ಕಿಂತಲೂ ಗ್ರಾಮೀಣ ಭಾಗದಲ್ಲಿ ಹಾಲೆ ಮರ ರಸ ಸವಿಯಲು ಜನರಲ್ಲಿ ಹೆಚ್ಚು ಉತ್ಸುಕತೆ ಇರುತ್ತೆ. ಆದ್ರೆ ಈ ಬಾರಿ ಕೊರೊನಾ ಹಿನ್ನೆಲೆಯಲ್ಲಿ ನಗರದ ಮಂದಿಯಲ್ಲೂ ಹೆಚ್ಚಿನ ಉತ್ಸಾಹ ಇತ್ತು. ಯಾಕಂದ್ರೆ ಕೊರೊನಾ ಸೋಂಕಿಗೆ ಹಾಲೆ ಮರ ಕಷಾಯ ರಾಮಬಾಣವಾಗೋ ನಂಬಿಕೆ. ಹಾಗಾಗಿ ಈ ಬಾರಿ ಕರಾವಳಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಟಿ ಅಮಾವಾಸ್ಯೆಯನ್ನ ಆಚರಣೆ ಮಾಡಿದ್ದಾರೆ.
ಕೊರೊನಾ ಮಧ್ಯೆ ಕರಾವಳಿಯಲ್ಲಿ ಆಟಿ ಅಮಾವಾಸ್ಯೆ ಆಚರಣೆ
TRENDING ARTICLES