ಚಿತ್ರದುರ್ಗ : ಚಳ್ಳಕೆರೆ ಪಟ್ಟಣದಲ್ಲಿ ತಡರಾತ್ರಿ ಸುರಿದ ಮಳೆಯಿಂದ ತಗ್ಗು ಪ್ರದೇಶದ ಮನೆಗಳಿಗೆ ನೀರು ಹರಿದಿದೆ. ನಗರದ ಅಬಿಷೇಕ್ ನಗರದ ಬಹುತೇಕ ಮನೆಗಳಿಗೆ ಮಳೆ ನೀರು ನುಗ್ಗಿರೊದ್ರಿಂದ ಮನೆಗಳ ಗೃಹ ಉಪಯೋಗಿ ವಸ್ತುಗಳು ಹಾಗು ದಿನಸಿ ಸಾಮಗ್ರಿಗಳು ನೀರು ಪಾಲಾಗಿವೆ ಹಾಗು ಬಹುತೇಕ ಸಣ್ಣಪುಟ್ಟ ಮನೆಗಳು ಜಲಾವೃತವಾಗಿವೆ. ಈ ಕುರಿತ ಮಾಹಿತಿ ಪಡೆದ ಸ್ಥಳಿಯ ಶಾಸಕ ರಘುಮೂರ್ತಿರವರು ಸ್ತಳಕ್ಕೆ ಬೇಟಿ ನೀಡಿ ಪರೀಶಿಲಿಸಿದ್ದಾರೆ. ತಹಸಿಲ್ದಾರ್ ಹಾಗು ನಗರಸಭೆ ಅಯುಕ್ತರು ಜೊತೆ ಬೇಟಿ ನಿಡಿದ ಶಾಸಕರು ಸಂತ್ರಸ್ತರಿಗೆ ತಾತ್ಕಾಲಿಕವಾಗಿ ನೆರವು ನೀಡಿ ಸಮುದಾಯ ಭವನದಲ್ಲಿ ಶೆಲ್ಟರ್ ವ್ಯವಸ್ಥೆ ಮಾಡಿದ್ದಾರೆ.