Friday, January 17, 2025

ಕೊರೋನಾ ಸೋಂಕಿತನ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ ಡಿ.ಕೆ ಸುರೇಶ್​​

ರಾಮನಗರ: ಕೋವಿಡ್ ಆಸ್ಪತ್ರೆಗೆ ತೆರಳಿ ಸೊಂಕಿತರಿಗೆ ಆತ್ಮಸ್ಥೈರ್ಯ ತುಂಬಿದ್ದ ಸಂಸದ ಡಿ.ಕೆ.ಸುರೇಶ್ ಇದೀಗ ಮೃತ ಸೋಂಕಿತರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು ಮೃತರಿಗೆ ಅಂತಿಮ ನಮನ ಸಲ್ಲಿಸಿದ್ದಾರೆ. ಕಳೆದ ಮೂರು ದಿನಗಳ‌ ಹಿಂದೆ ಕನಕಪುರದ ಸಪ್ತಗಿರಿ ಜ್ಯುವೆಲರ್ಸ್​​​ ಮಾಲೀಕರಾದ ನರಸಿಂಹ ಶೆಟ್ಟಿ ಅವರಿಗೆ ಕೊರೋನಾ ಪಾಸಿಟಿವ್ ಕಾಣಿಸಿಕೊಂತ್ತು.ಆದರೆ ಚಿಕಿತ್ಸೆ ಫಲಕಾರಿಯಾಗದೆ ಸೋಂಕಿತರು ಸಾವನ್ನಪ್ಪಿದ್ದರು.
ಸೋಂಕಿತ ವ್ಯಕ್ತಿಯ ಅಂತ್ಯಕ್ರಿಯೆ ಕನಕಪುರದ ದೇಗುಲ ಮಠದ ಸಮೀಪದ ಸ್ಮಶಾನದಲ್ಲಿ ಮಾಡಲಾಯಿತು.ಈ ವೇಳೆ ಅಂತ್ಯಕ್ರಿಯೆಯಲ್ಲಿ ಪಿಪಿಇ ಕಿಟ್ ಧರಿಸಿ ಸಂಸದ ಡಿ.ಕೆ ಸುರೇಶ್, ಎಂಎಲ್​ಸಿ ರವಿ ಪಾಲ್ಗೊಂಡಿದ್ದು, ಕುಟುಂಬ ಸದಸ್ಯರಿಗೆ ಧೈರ್ಯ ತುಂಬಿದ್ದಾರೆ.

RELATED ARTICLES

Related Articles

TRENDING ARTICLES