Friday, January 17, 2025

ಗುಡ್ಡ ಕುಸಿಯುವ ಆತಂಕ : ಶಾಲೆಯಲ್ಲೇ ಆಶ್ರಯ ಪಡೆದ ಕುಟುಂಬ

ಕಾರವಾರ : ಮನೆ ಎದುರಿನ ಗುಡ್ಡ ಕುಸಿದ ಪರಿಣಾಮ ಮನೆ ಬಿಳ್ಳುವ ಆತಂಕದಲ್ಲಿ ಕುಟುಂಬವೊಂದು ನಿತ್ಯ ಮನೆ ಬಿಟ್ಟು ಎರಡು ಕಿ.ಮೀ ದೂರದ ಶಾಲೆಯೊಂದಕ್ಕೆ ತೆರಳಿ ಆಶ್ರಯ ಪಡೆಯುತ್ತಿದ್ದು, ತಮಗೆ ಶಾಸ್ವತ  ಇಲ್ಲವೆ ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಇದೀಗ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ. ಕಾರವಾರ ತಾಲೂಕಿನ ಕೇರವಡಿ ಗ್ರಾಮದ ಖಾಂಡ್ಯಾಳಿಯ ಮಜಿರೆ ನಿವಾಸಿಯಾದ ಸುರೇಶ ರಾಮಾ ಪಾಗಿಯ ಕುಟುಂಬದವರು ಹಳ್ಳದ ತೀರದ ತಮ್ಮ ಸ್ವಂತ ಜಮೀನನಲ್ಲಿ ಮನೆ ಕಟ್ಟಿಕೊಂಡು ಕಳೆದ ಹಲವು ವರ್ಷಗಳಿಂದ ವಾಸ ಮಾಡುತ್ತಿದ್ರು. ಆದ್ರೆ ಮನೆ ಎದುರಿಗೆ ಹಳ್ಳ ಹರಿಯುತ್ತಿದ್ದು, ಇದೀಗ ಭಾರಿ ಮಳೆಗೆ ಮನೆ ಎದುರಿನ ಗುಡ್ಡ ಕುಸಿಯಲಾರಂಭಿಸಿದೆ. ಈಗಾಗಲೇ ಸಾಕಷ್ಟು ಪ್ರಮಾಣದಲ್ಲಿ ಮಣ್ಣು ಕುಸಿದು ನೀರುಪಾಲಾಗಿದ್ದು, ಮನೆ ಕೂಡ ಕುಸಿಯುವ ಆತಂಕ ಎದುರಾಗಿದೆ.
ಈಗಾಗಲೇ ಕೆರವಡಿ ಗ್ರಾಮ ಪಂಚಾಯಿತಿ ಹಾಗೂ ತಹಶೀಲ್ದಾರರಿಗೆ ಮನವಿ ಮಾಡಲಾಗಿದೆ. ಗ್ರಾಮ ಪಂಚಾಯಿತಿಯಿಂದ ಮುನ್ನೆಚ್ಚರಿಕಾ ಕ್ರಮವಾಗಿ ಕುಟುಂಬದ ಸದಸ್ಯರಿಗೆ ಕೆರವಡಿ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯ ಕಾಳಜಿ ಕೇಂದ್ರ ತೆರೆದಿದ್ದಾರೆ. ಆದರೆ ಪ್ರತಿ ನಿತ್ಯ ರಾತ್ರಿ 2 ಕಿ.ಮೀ ಕಾಲ್ನಡಿಗೆ ಮೂಲಕ ಶಾಲೆಗೆ ತೆರಳಬೇಕಾಗಿದೆ. ಈಗಿರುವ ಸ್ವಂತ ಜಮೀನು ನದಿ ಅಂಚಿನಲ್ಲಿರುವುದರಿಂದ ಎಲ್ಲಿ ಮನೆ ನಿರ್ಮಾಣ ಮಾಡಿದರು ಮತ್ತೆ ಕುಸಿಯುವ ಆತಂಕ ಇದ್ದು, ಸದ್ಯ ನಮಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿ ಬಳಿಕ ಶಾಸ್ವತವಾಗಿ ನೆಲೆಸಲು ಕೆರವಡಿ ಗ್ರಾಮದಲ್ಲಿ ಸ್ಥಳವಕಾಶ ಕಲ್ಪಿಸುವಂತೆ ಜಿಲ್ಲಾಡಳಿಕ್ಕೆ ಮನವಿ ಮಾಡಿದ್ದಾರೆ.

ಉದಯ ಬರ್ಗಿ ಪವರ್ ಟಿವಿ ಕಾರವಾರ

RELATED ARTICLES

Related Articles

TRENDING ARTICLES