ಟೀಮ್ ಇಂಡಿಯಾದ ಮಾಜಿ ಕ್ಯಾಪ್ಟನ್ ರಾಹುಲ್ ದ್ರಾವಿಡ್ ಕ್ರಿಕೆಟಿಂದ ಮಾತ್ರವಲ್ಲದೆ ತಮ್ಮ ವ್ಯಕ್ತಿತ್ವದಿಂದಲೂ ಮಾದರಿಯಾಗಿದ್ದಾರೆ. ದ್ರಾವಿಡ್ ಹಾಗೂ ಅವರ ವ್ಯಕ್ತಿತ್ವವನ್ನು ಇಷ್ಟಪಡ್ದೇ ಇರೋರೇ ಇಲ್ಲ. ಇದೀಗ ದ್ರಾವಿಡ್ ವ್ಯಕ್ತಿತ್ವದ ಬಗ್ಗೆ ವೆಸ್ಟ್ ಇಂಡೀಸ್ ಮಾಜಿ ಬೌಲರೊಬ್ರು ಗುಣಗಾನ ಮಾಡಿದ್ದಾರೆ.
ದ್ರಾವಿಡ್ ಶ್ರೇಷ್ಠ ವ್ಯಕ್ತಿತ್ವವನ್ನು ಸ್ಮರಿಸಿರೋದು ವೆಸ್ಟ್ ಇಂಡೀಸ್ ನ ಮಾಜಿ ವೇಗಿ ಟಿನೋ ಬೆಸ್ಟ್. ವೆಬ್ಸೈಟೊಂದಕ್ಕೆ ನೀಡಿದ ಸಂದರ್ಶನದಲ್ಲಿ ಶ್ರೀಲಂಕಾದಲ್ಲಿ ನಡೆದಿದ್ದ ಭಾರತ, ಶ್ರೀಲಂಕಾ, ವೆಸ್ಟ್ ಇಂಡೀಸ್ ನಡುವಿನ ತ್ರಿಕೋನ ಸರಣಿ ವೇಳೆಯ ಘಟನೆಯೊಂದನ್ನು ಬೆಸ್ಟ್ ನೆನಪು ಮಾಡಿಕೊಂಡಿದ್ದಾರೆ.
‘’ 2005ರ ಇಂಡಿಯನ್ ಆಯಿಲ್ ಕಪ್ನಲ್ಲಿ ನಾನು ರಾಹುಲ್ ದ್ರಾವಿಡ್ ಅವ್ರಿಗೆ ಬೌಲಿಂಗ್ ಮಾಡಿದ್ದೆ. ಆಗ ಅವರು ಸತತ ಮೂರು ಬೌಂಡರಿ ಬಾರಿಸಿದ್ರು. ಆದ್ರೆ, ಮ್ಯಾಚ್ ಮುಗಿದ ಮೇಲೆ ಮಾತಾಡುವಾಗ, ‘’ ಯಂಗ್ ಮ್ಯಾನ್, ನಿನ್ನ ಎನರ್ಜಿ ನಂಗೆ ಇಷ್ಟವಾಯ್ತು, ಕೇವಲ ಬೌಂಡರಿಗಳನ್ನು ಬಾರಿಸಿದೆ ಅಂತ ನಿಲ್ಲಿಸ ಬೇಡ, ಉತ್ತಮ ಆಟವನ್ನು ಮುಂದುವರೆಸು’’ ಅಂತ ಹುರುದುಂಬಿಸಿದ್ರು. ಹೀಗೆ ಯಾವಾಗ್ಲೂ ಪ್ರೋತ್ಸಾಹ ಕೊಡ್ತಿದ್ರು. ಅವರು ಅದೆಷ್ಟು ಸಿಹಿ, ವಿನಮ್ರ ವ್ಯಕ್ತಿತ್ವದ ವ್ಯಕ್ತಿ ಅಂತ ನನ್ನ ಅನುಭಕ್ಕೆ ಬಂತು’’ ಅಂತ ಹೇಳಿದ್ದಾರೆ.
ಭಾರತೀಯ ಕ್ರಿಕೆಟಿಗರಿಂದ ನಂಗೆ ಸಾಕಷ್ಟು ಪ್ರೀತಿ ಸಿಕ್ಕಿದೆ. ಯುವರಾಜ್ ಸಿಂಗ್ ಒಮ್ಮೆ ನಂಗೆ ಬ್ಯಾಟ್ ನೀಡಿದ್ರು. ಭಾರತೀಯ ಕ್ರಿಕೆಟಿಗರು ಬಹಳ ಒಳ್ಳೆಯವ್ರು ಅಂತ ಮೆಚ್ಚುಗೆಯ ನುಡಿಗಳನ್ನಾಡಿದ್ದಾರೆ.