Thursday, January 16, 2025

ಸಾವಯವ ಕೃಷಿಯಿಂದ ಉಪ್ಪು ನೀರಿನಲ್ಲೂ ಫಲವತ್ತಾದ ಬಾಳೆ ಬೆಳೆದ ರೈತ !

ಬಾಗಲಕೋಟೆ : ಸವಳು ಭೂಮಿಯಲ್ಲಿ ಫಲವತ್ತಾಗಿ ಬಾಳೆ ಬೆಳೆದಿದ್ದಾರೆ ಜಿಲ್ಲೆ ಮುಧೋಳ ತಾಲ್ಲೂಕಿನ ವಜ್ರಮಟ್ಟಿ ಗ್ರಾಮದ ಮಹೇಶ್ ನಾಗರೆಡ್ಡಿ.ಅವರ ಒಂದು ಎಕರೆ ಜಮೀನಿನಲ್ಲಿ ನಾಲ್ಕೈದು ಬೋರ್ ವೆಲ್ ಗಳನ್ನ ಹಾಕಿಸಿದ್ರು ಸಿಹಿ ನೀರು ಬಾರದೆ ಉಪ್ಪು ನೀರೇ ಬಂದ್ವು. ಹೊಲದಲ್ಲಿ ಕೃಷಿ ಮಾಡಲಿಕ್ಕೆ ಆಗದೆ ಮೈತುಂಬ ಸಾಲದ ಸುಳಿಗೆ ಸಿಲುಕಿ ಕಂಗೆಟ್ಟಿದ್ರು.ಕೊನೆಯದಾಗಿ ಸಾವಯವ ಕೃಷಿ ಕದ ತಟ್ಟಿದ್ದೆ ಅವರಿಗೆ ಅಧೃಷ್ಟ ಒಲಿದು ಬಂತು.ಸವಳು ನೀರಿಗೆ ಡ್ರಿಪ್ ಮಾಡಿಸಿ ಒಂದು ಎಕರೆ ಜಮೀನಿನಲ್ಲಿ 14 ನೂರು ಬಾಳೆ ಸಸಿ ಹಚ್ಚಿ, ಮನೆಯಲ್ಲಿರೋ ಹಸುಗಳ ಗೋಮೂತ್ರಗಳಿಂದ ಜೀವಾಮೃತ ತಯಾರಿಸಿ ಜಮೀನಿಗೆ ಹಾಕಿ ಇಂದು ಫಲವತ್ತಾದ ಬಾಳೆ ಬೆಳೆದು ನಿಂತಿದೆ.

ಇನ್ಮು ಸವಳು ನೀರಿನಿಂದ ಬೆಳೆ ಬೆಳೆಯೊಕ್ಕಾಗಲ್ಲ ಅಂತಾ ಕೈಕಟ್ಟಿ ಕುಳಿತ ರೈತ ಮಹೇಶ್ ನಾಗರಡ್ಡಿ ಅವರು ಸಾವಯವ ಕೃಷಿ ಮೂಲಕ ಬೆಳೆಯದ ಹೊಲದಲ್ಲಿ ಫಲವತ್ತಾದ ಬೆಳೆ ಬೆಳೆದು ಇಂದು ಮಾದರಿಯಾಗಿದ್ದಾರೆ ಅಂದ್ರೆ ತಪ್ಪಾಗಲಿಕ್ಕಿಲ್ಲ.ಉಪ್ಪು ನೀರಿನಿಂದ ಕೆಟ್ಟುಹೊದ ಜಮೀನಿನಲ್ಲಿ ಕೃಷಿತಜ್ಞರ ಮಾರ್ಗದರ್ಶನದಲ್ಲಿ ಹಸುಗಳ ಸೇಗಣಿ, ಗೋ ಮೂತ್ರ, ದ್ವಿಧಳದಾನ್ಯಗಳ ಹಿಟ್ಟು, ಮಜ್ಜಿಗೆ,ಬೆಲ್ಲ ಮೀಶ್ರಿತ ಜೀವಾಮೃತ ತಯಾರಿಸಿ ಡ್ರಿಪ್ ಮೂಲಕ ಬಾಳೆಗೆ ನೀರುನಿಸುವ ಮೂಲಕ ಫಲವತ್ತಾದ ಬಾಳೆ ಬೆಳೆದಿದ್ದಾರೆ.ದೇಶಿ ಸಿಲ್ಡ್ ಬೇವಿನ ಹಿಂಡಿ,ಮತ್ತು ಜೀವಾಮೃತದಿಂದ ನೀರಿನಲ್ಲಿದ್ದ ಉಪ್ಪು ಅಂಶವನ್ನ ಹೊಗಲಾಡಿಸಿ ಭೂಮಿಯನ್ನ ಫಲವತ್ತಾಗಿ ಮಾಡುವ ಸಾಮರ್ಥ್ಯಯಿದೆ ಅನ್ನೋದನ್ನ ರೈತ ಮಹೇಶ್ ಅವರು ಸವಳು ನೀರಲ್ಲಿ ಫಲವತ್ತಾದ ಬಾಳೆ ಬೆಳೆದು ಸಾಭೀತು ಪಡೆಸಿದ್ದಾರೆ.

ನಿಜಗುಣ ಮಠಪತಿ,ಪವರ್ ಟಿವಿ ಬಾಗಲಕೋಟೆ

RELATED ARTICLES

Related Articles

TRENDING ARTICLES