Thursday, January 16, 2025

ರಾಜ್ಯದಲ್ಲಿ ಸತತ ಮೂರನೇ ದಿನವೂ 3000ಕ್ಕೂ ಹೆಚ್ಚು ಕೊರೋನಾ ಪ್ರಕರಣ

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಹಾವಳಿ ತೀವ್ರಗತಿಯಲ್ಲಿ ಏರುತ್ತಿದ್ದು, ಸತತ ಮೂರನೇ ದಿನವೂ 3,000ಕ್ಕೂ ಹೆಚ್ಚು ಪ್ರಕರಣಗಳು ಕಂಡುಬಂದಿವೆ.  ಕರ್ನಾಟಕದಲ್ಲಿ ಇಂದು 3,693 ಹೊಸ ಸೋಂಕಿತರು ಕಂಡುಬಂದಿದ್ದಾರೆ. ಬೆಂಗಳೂರಿನಲ್ಲಿ ಸತತ ಎರಡನೇ ದಿನವೂ ಕೊರೊನಾ ವೈರಸ್‌ 2 ಸಾವಿರದ ದಾಖಲೆ ಮಾಡಿರುವುದು ಆತಂಕ ಮೂಡಿಸಿದೆ.

ಇಂದು ಒಂದೇ ದಿನ 115 ಜನ ಕೊರೊನಾಗೆ ಬಲಿಯಾಗಿದ್ದು, ಇದು ಇಲ್ಲಿವರೆಗಿನ ಅತಿ ಹೆಚ್ಚಿನ ಸಂಖ್ಯೆಯಾಗಿದೆ. ಗುರುವಾರ 104 ಜನ ಕೋವಿಡ್‌ ಕಾರಣದಿಂದ ಅಸುನೀಗಿದ್ದರು. ಇನ್ನು, ಶುಕ್ರವಾರ 1,028 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿರುವುದು ಕೊಂಷ ಸಮಾದಾನ ಮೂಡಿಸಿದೆ.

ಕೊರೋನಾ ನಿಯಂತ್ರಣಕ್ಕಾಗಿ ಬೆಂಗಳೂರಿನಲ್ಲಿ ಲಾಕ್‌ಡೌನ್‌ ಹೇರಲಾಗಿದ್ದರೂ ಸಹ ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಶುಕ್ರವಾರ ಬರೋಬ್ಬರಿ 2,208 ಜನಕ್ಕೆ ಸೋಂಕು ತಗುಲಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ ಕೇವಲ ಬೆಂಗಳೂರೊಂದರಲ್ಲಿಯೇ  20,623ಕ್ಕೆ ಏರಿರುವುದು ಸರಕಾರದ ನಿದ್ದೆಗೆಡಿಸಿದೆ. ಇನ್ನು, ಸಿಲಿಕಾನ್‌ ಸಿಟಿಯಲ್ಲಿ 338 ಜನ ಗುಣಮುಖರಾಗಿದ್ದರೆ, ಒಂದೇ ದಿನ 75 ಜನ ಸಾವನ್ನಪ್ಪಿರುವುದು ಬೆಂಗಳೂರಿಗರಲ್ಲಿ ಭೀತಿಯನ್ನುಂಟು ಮಾಡಿದೆ

RELATED ARTICLES

Related Articles

TRENDING ARTICLES