ಮೈಸೂರು : ಅಂತೂ ನಾಲ್ಕು ಶುಕ್ರವಾರಗಳ ಆಷಾಢ ಮಾಸದ ಪೂಜೆಗಳು ಮುಗಿದಿದೆ. ವಿವಾದದಲ್ಲೇ ಅಂತಿಮ ತೆರೆ ಎಳೆಯಲಾಗಿದೆ. ಮೈಸೂರಿನ ಚಾಮುಂಡಿಬೆಟ್ಟದಲ್ಲಿ ನಡೆಯುವ ಆಷಾಢ ಶುಕ್ರವಾರಗಳ ಸಂಪ್ರದಾಯ ಪೂಜೆಗಳಿಗೆ ತೆರೆ ಬಿದ್ದಿದೆ. ಕೊನೆ ಆಷಾಡ ಶುಕ್ರವಾರವಾದ ಇಂದೂ ಸಹ ನಾಡದೇವಿ ಭಕ್ತರಿಗೆ ದರುಶನ ಕೊಡದೆ ಜನಪ್ರತಿನಿಧಿಗಳಿಗೆ ಮಾತ್ರ ದರುಶನ ಕೊಟ್ಟಿದ್ದಾಳೆ. ಕೊನೆ ಶುಕ್ರವಾರ ವಿವಾದದ ಮೂಲಕವೇ ತೆರೆ ಬಿದ್ದಿದೆ.
ಕೊರೊನಾ ನಾಗಾಲೋಟಕ್ಕೆ ಬ್ರೇಕ್ ಹಾಕುವ ಉದ್ದೇಶದಿಂದ ಅದ್ದೂರಿಯಾಗಿ ನಡೆಯಬೇಕಿದ್ದ ಅಷಾಢ ಶುಕ್ರವಾರ ಪೂಜೆಗಳು ಕೇವಲ ಸಾಂಪ್ರದಾಯಿಕ ಆಚರಣೆಗೆ ಸೀಮಿತವಾಯ್ತು. ಭಕ್ತರಿಗೆ ಪ್ರವೇಶ ನಿರ್ಭಂದದ ನಡುವೆಯೇ ಪೂಜಾ ಕೈಂಕರ್ಯಗಳು ನಡೆಯಿತು. ದಿನ ನಿತ್ಯದಂತೆ ಮುಂಜಾನೆ ಅಮ್ಮನವರಿಗೆ ಅಭಿಷೇಕ ನಂತರ ಪೂಜೆ ನೆರವೇರಿತು. ದುರ್ಗಾ ಅಲಂಕಾರದಲ್ಲಿ ದೇವಿ ಕಂಗೊಂಳಿಸಿದ್ಲು. ಪ್ರತಿವಾರದಂತೆ ಈ ಶುಕ್ರವಾರವೂ ದೇವಸ್ಥಾನದ ಆವರಣದಲ್ಲಿ ಸಾಂಪ್ರದಾಯಿಕವಾಗಿ ಉತ್ಸವ ನೆರವೇರಿತು. ದೇವಸ್ಥಾನದ ಪ್ರಧಾನ ಅರ್ಚಕರಾದ ಡಾ.ಶಶಿ ಶೇಖರ್ ಧೀಕ್ಷಿತ್ ನೇತೃತ್ವದಲ್ಲಿ ಪೂಜೆ ನೆರವೇರಿತು.
ಕೊನೆ ಆಷಾಢ ಶುಕ್ರವಾರವಾದ ಇಂದೂ ಸಹ ಸಾರ್ವಜನಿಕರಿಗೆ ಪ್ರವೇಶ ನಿರ್ಭಂಧಿಸಲಾಗಿತ್ತು. ಬೆಟ್ಟಕ್ಕೆ ತೆರಳುವ ಎಲ್ಲಾ ಮಾರ್ಗಗಳನ್ನೂ ಬಂದ್ ಮಾಡಲಾಗಿತ್ತು. ಗ್ರಾಮಸ್ಥರಿಗೂ ಸಹ ಪ್ರವೇಶಕ್ಕೆ ಅವಕಾಶ ಇರಲಿಲ್ಲ. ಇಂತಹ ಸಂಧರ್ಭದಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಮೆಟ್ಟಿಲು ಹತ್ತಿ ದೇವಸ್ಥಾನ ತಲುಪಿದ್ದು ಭಾರಿ ವಿವಾದಕ್ಕೆ ಕಾರಣವಾಯ್ತ. ಇದೇ ವೇಳೆ ಕಾರ್ಪೊರೇಟರ್ ಭಾಗ್ಯ ಮಾದೇಶ್ ಬಂದಾಗ ಪೊಲೀಸ್ರು ಪ್ರವೇಶ ನಿರಾಕರಿಸಿದ್ರು. ಇದ್ರಿಂದ ಸಿಟ್ಟಿಗೆದ್ದ ಭಾಗ್ಯ ಮಾದೇಶ್ ತಾರತಮ್ಯ ಮಾಡುತ್ತಿರುವ ಬಗ್ಗೆ ಕಿಡಿಕಾರಿದ್ರು. ಅಲ್ಲದೆ ಗ್ರಾಮಸ್ಥರು ಸಹ ಪೊಲೀಸರ ವಿರುದ್ದ ತಿರುಗಿ ಬಿದ್ದು ವಾಗ್ವಾದಕ್ಕೆ ಇಳಿದ್ರು. ಒಬ್ಬೊಬ್ಬರಿಗೆ ಒಂದೊಂದು ಕಾನೂನು ಪಾಲಿಸುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ರು. ಇಂತಹ ಆರೋಪಗಳ ಮಧ್ಯೆ ಸಂಸದೆ ಶೋಭಾ ಕರಂದ್ಲಾಜೆ ಸೈಲೆಂಟಾಗಿ 1001 ಮೆಟ್ಟಿಲು ಏರಿ ತಾಯಿ ದರುಶನ ಪಡೆದು ಪುನೀತರಾದ್ರು. ಆದ್ರೆ ಜಿಲ್ಲಾಡಳಿತದ ತಾರತಮ್ಯ ವರ್ತನೆ ಟೀಕೆಗೆ ಗುರಿಯಾಯ್ತು.
ಕೊರೊನಾ ನಿಯಂತ್ರಣಕ್ಕೆ ಸಾರ್ವಜನಿಕರ ಪ್ರವೇಶ ನಿರ್ಭಂಧ ನಿರ್ಧಾರ ಸರಿ ಇದೆ. ಆದ್ರೆ ಜನಪ್ರತಿನಿಧಿಗಳಿಗೆ ಈ ಕಾನೂನು ಅನ್ವಯಿಸುವುದಿಲ್ಲವೇ ಎಂಬ ಪ್ರಶ್ನೆ ಜಿಲ್ಲಾಡಳಿತದ ಮುಂದಿದೆ. ಇದಕ್ಕೆ ಜಿಲ್ಲಾಡಳಿತ ತಕ್ಕ ಉತ್ತರ ನೀಡಬೇಕಿದೆ…