ಉಡುಪಿ : ಅಜ್ಜರಕಾಡು ಸರಕಾರಿ ಜಲ್ಲಾಸ್ಪತ್ರೆಯ ಸಿಬ್ಬಂದಿಗಳಲ್ಲಿ ಕೊರೋನಾ ಪಾಸಿಟಿವ್ ಪತ್ತೆಯಾದ ಹಿನ್ನಲೆಯಲ್ಲಿ ಸೀಲ್ ಡೌನ್ ಮಾಡಲಾಗಿದೆ. ಗ್ಯಾಂಗ್ರೀನ್ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿಯಲ್ಲಿ ಜ್ವರ ಕಾಣಿಸಿಕೊಂಡು, ಕೊರೋನಾ ಸೊಂಕು ಪತ್ತೆಯಾಗಿತ್ತು. ಆತನ ಶಸ್ತ್ರ ಚಿಕಿತ್ಸೆಯ ಬಳಿಕ ಇಬ್ಬರು ವೈದ್ಯರು, ಓರ್ವ ನರ್ಸ್ ಗೆ ಕೊರೋನಾ ಸೊಂಕು ತಗುಲಿತ್ತು. ಆ ಬಳಿಕ ಆತನ ವಾರ್ಡ್ ನಲ್ಲಿದ್ದ 9 ಜನ ರೋಗಗಳಿಗೂ ಸೊಂಕು ಪಸರಿತ್ತು. ಸದ್ಯ ಓರ್ವ ಸೊಂಕಿತ ವೈದ್ಯರು ಕೋವಿಡ್ ಆಸ್ಪತ್ರೆ ದಾಖಲಾಗಿದ್ದಾರೆ. ಉಳಿದಂತೆ ವಾರ್ಡ್ ನ ಸ್ವಚ್ಛತಾ ಕೆಲಸ ಮಾಡಿದ ಸಿಬ್ಬಂದಿ, ಅಡುಗೆಯವರಿಗೆ ಸೇರಿ ಒಟ್ಟು 14 ಮಂದಿಗೆ ಸೊಂಕು ಪಸರಿಸಿದೆ. ಸೊಂಕಿತರ ಸಂಪರ್ಕಕ್ಕೆ ಬಂದವರ ಗಂಟಲದ್ರವ ಮಾದರಿ ಪಡೆದು ಹೋಂ ಕ್ವಾರಂಟೈನ್ ಗೆ ಹಾಕಲಾಗಿದೆ. ರೋಗಿಗೆ ಗ್ಯಾಂಗ್ರೀನ್ ಶಸ್ತ್ರ ಚಿಕಿತ್ಸೆ ಮಾಡಿದ ಕೊಠಡಿ, ಸೊಂಕಿತರು ಇದ್ದ ವಾರ್ಡ್ ಸೀಲ್ ಡೌನ್ ಮಾಡಲಾಗಿದೆ. ಆಸ್ಪತ್ರೆಯನ್ನು ಮೂರು ದಿನಗಳ ಕಾಲ ಸೀಲ್ ಡೌನ್ ಮಾಡಲಾಗಿದ್ದು, ಸಂಪೂರ್ಣ ಸ್ಯಾನಿಟೈಸೇಶನ್ ಮುಗಿದ ಬಳಿಕ ಆಸ್ಪತ್ರೆ ರೀ ಓಪನ್ ಆಗಲಿದೆ. ಸದ್ಯ ಆಸ್ಪತ್ರೆಯಲ್ಲಿ 90 ಜನ ಒಳರೋಗಿಗಳಿದ್ದು, ಶಂಕಿತ ರೋಗಿಗಳು ಇರುವ ವಾರ್ಡ್ ಗಳನ್ನು ಪತ್ಯೇಕವಾಗಿ ಕಾರ್ಯನಿರ್ವಹಣೆ ಮಾಡಲಾಗುತ್ತಿದೆ. ತುರ್ತು ಚಿಕಿತ್ಸೆ ಮಾತ್ರ ಲಭ್ಯವಿದ್ದು, ಮೂರು ದಿನಗಳ ಬಳಿಕ ಮತ್ತೆ ಆಸ್ಪತ್ರೆ ಎಂದಿನಂತೆ ಕಾರ್ಯನಿರ್ವಹಿಸಲಿದೆ.