ಉಡುಪಿ : ಸಿಬ್ಬಂದಿಗಳು ಕೊರೋನಾ ಪಾಸಿಟಿವ್ ಆದ ಹಿನ್ನಲೆಯಲ್ಲಿ ಬೈಂದೂರು ಪೊಲೀಸ್ ಠಾಣೆ ಎರಡನೇಯ ಬಾರಿ ಸೀಲ್ ಡೌನ್ ಆಗಿದೆ. ಠಾಣೆಯ ಎಎಸ್ಐ, ಮಹಿಳಾ ಹೋಮ್ ಗಾರ್ಡ್ ಸಿಬ್ಬಂದಿ ಸೇರಿ ಒಟ್ಟು ಮೂವರನ್ನು ಕೊವೀಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಳೆದ ತಿಂಗಳಿನಲ್ಲಿ ಸಿಬ್ಬಂದಿಯೋರ್ವರಿಗೆ ಕೊರೋನಾ ಕಾಣಿಸಿಕೊಂಡ ಕಾರಣಕ್ಕೆ ಮೊದಲ ಬಾರಿಗೆ ಪೊಲೀಸ್ ಠಾಣೆ ಸೀಲ್ ಡೌನ್ ಮಾಡಲಾಗಿತ್ತು. ಅಲ್ಲದೇ ಸಿಬ್ಬಂದಿಯ ಪ್ರಾಥಮಿಕ ಸಂಪರ್ಕದಲ್ಲಿದ್ದ ಠಾಣೆಯ ಎ.ಸ್.ಐ ಸೇರಿ ಹಲವರು ಹೋಂ ಕ್ವಾರಂಟೈನ್ ಗೆ ಒಳಗಾಗಿದ್ದರು. ಆ ಬಳಿಕ ಠಾಣೆಯನ್ನು ಸ್ಯಾನಿಟೈಸ್ ಮಾಡಿ ಮರು ಆರಂಭ ಮಾಡಲಾಗಿತ್ತು. ಸದ್ಯ ಮತ್ತೋಮ್ಮೆ ಸೀಲ್ ಡೌನ್ ಆಗಿದ್ದು, ಸ್ಯಾನಿಟೈಸ್ ಮಾಡಿದ ಬಳಿಕವಷ್ಟೆ ಠಾಣೆ ಕಾರ್ಯಾರಂಭವಾಗಲಿದೆ.