ಹುಬ್ಬಳ್ಳಿ : ಧಾರವಾಡ ಜಿಲ್ಲೆಯಲ್ಲಿ ಲಾಕ್ ಡೌನ್ ಜಾರಿಗೊಳಿಸಲಾಗಿದೆ, ಆದ್ರೆ ತರಕಾರಿ ಖರೀದಿಗೆ ಜನರು ಮುಗಿಬಿದ್ದಿದ್ದಾರೆ. ಹುಬ್ಬಳ್ಳಿಯ ಸರಾಫಗಟ್ಟಿ ಮಾರುಕಟ್ಟೆ ಯಲ್ಲಿ ಜನವೋ ಜನ.
ಹೌದು ಲಾಕ್ ಡೌನ್ ಆದೇಶ ಘೋಷಣೆ ಮಾಡಿದ ಹಿನ್ನಲೆ 12 ಗಂಟೆಯವರೆಗೆ ಅಗತ್ಯ ವಸ್ತುಗಳ ಮಾರಾಟಕ್ಕೆ ಅವಕಾಶ ನೀಡಲಾಗಿತ್ತು.ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ತರಕಾರಿ ದಿನಸಿ ಮಾರಾಟ ಮಾಡುತ್ತಿದ್ದ ವ್ಯಾಪಾರಸ್ಥರಿಗೆ ಪಾಲಿಕೆ ಸಿಬ್ಬಂದಿಗಳು ಬಿಸಿ ಮುಟ್ಟಿಸಿದ್ದು, ತರಕಾರಿ ವ್ಯಾಪಾರಸ್ಥರನ್ನ ತೆರವು ಗೊಳಿಸಿದ್ದಾರೆ.
ಪ್ರತಿನಿತ್ಯ ಜನಜಂಗುಳಿಯಿಂದ ತುಂಬಿರುತ್ತಿದ್ದ ಮಾರುಕಟ್ಟೆಯೂ ಲಾಕ್ ಡೌನ್ ಸಂದರ್ಭದಲ್ಲಿ ಬೆಳ್ಳಂಬೆಳಗ್ಗೆ ಜನದಟ್ಟಣೆಯಿಂದ ಕೂಡಿತ್ತು. ಪಾಲಿಕೆ ಅಧಿಕಾರಿಗಳ ಸೂಚನೆ ಮೇರೆಗೆ ವ್ಯಾಪಾರಸ್ಥರು ಆಟೋ ಟ್ರ್ಯಾಕ್ಟರ್ ಗಳಲ್ಲಿ ತರಕಾರಿ ತುಂಬಿಕೊಂಡು ಹೋದರು.