Thursday, January 16, 2025

ಗಾಂಜಾ ಕೇಸಲ್ಲಿ ಅಂದರ್ – ಕೊರೊನಾ ಕೇಸಲ್ಲಿ ಬಾಹರ್

ಚಿಕ್ಕಮಗಳೂರು : ಕಳೆದೊಂದು ವಾರದ ಹಿಂದೆ ಗಾಂಜಾ ಕೇಸಲ್ಲಿ ಅಂದರ್ ಆಗಿದ್ದ ಖೈದಿಗೂ ಕೊರೊನಾ ಪಾಸಿಟಿವ್ ಬಂದು ಜೈಲಿನಿಂದ ಕೋವಿಡ್ ಆಸ್ಪತ್ರೆಗೆ ಶಿಫ್ಟ್ ಆಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಕಳೆದೊಂದು ವಾರದ ಹಿಂದೆ ಮೂಡಿಗೆರೆ ತಾಲೂಕಿನ ಗೋಣಿಬೀಡು ಗ್ರಾಮದಲ್ಲಿ ಮಾರುತಿ 800 ಕಾರಿನಲ್ಲಿ 50 ಕೆ.ಜಿ. ಗಾಂಜಾವನ್ನ ಸಾಗಿಸುತ್ತಿದ್ದ ನಾಲ್ವರನ್ನ ಪೊಲೀಸರು ಬಂಧಿಸಿದ್ದರು. ಬಂಧಿತ ನಾಲ್ವರನ್ನು ಚಿಕ್ಕಮಗಳೂರು ಜಿಲ್ಲಾ ಕಾರಾಗೃಹಕ್ಕೆ ರವಾನಿಸಲಾಗಿತ್ತು. ಆದ್ರೀಗ, ಆ ನಾಲ್ವರಲ್ಲಿ ಓರ್ವನಿಗೆ ಕೊರೊನಾ ಸೋಂಕು ದೃಢವಾಗಿದ್ದು, ಕೊರೊನಾ ಸೋಂಕಿತ ಖೈದಿಯನ್ನ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಂಧಿತ ನಾಲ್ವರು ಆಂಧ್ರಪ್ರದೇಶದದಿಂದ 80 ಕೆ.ಜಿ. ಗಾಂಜಾ ತರಿಸಿ 30 ಕೆಜಿಯನ್ನ ಹಾಸನ ಹಾಗೂ ಸಖಲೇಶಪುರದಲ್ಲಿ ಮಾರಾಟ ಮಾಡಿದ್ದರು. ಉಳಿದ 50 ಕೆ.ಜಿ. ಗಾಂಜಾವನ್ನ ಹೆಚ್ಚಿನ ದರಕ್ಕೆ ಮಾರಾಟ ಮಾಡಲು ಮಾರುತಿ 800 ಕಾರಿನಲ್ಲಿ ಮಂಗಳೂರಿಗೆ ಸಾಗಿಸುವಾಗ ಪೊಲೀಸರ ಅಥಿತಿಯಾಗಿದ್ದರು. ಇದೀಗ, ಆ ನಾಲ್ವರಲ್ಲಿ ಓರ್ವನಿಗೆ ಸೋಂಕು ದೃಢಪಟ್ಟಿದೆ. ಜಿಲ್ಲೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಇದು ದೊಡ್ಡ ಗಾಂಜಾ ರೇಡ್ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಮಚ್ಚಿಂದ್ರ ಸಿಬ್ಬಂದಿಗಳನ್ನ ಶ್ಲಾಘಿಸಿದ್ದರು. ಈಗ ಕೋವಿಡ್ ಆಸ್ಪತ್ರೆಗೆ ದಾಖಲಿಸುವ ಗಾಂಜಾ ಕಳ್ಳನಿಗೆ ಆಸ್ಪತ್ರೆಯಲ್ಲಿ ಪ್ರತ್ಯೇಕ ಕೊಠಡಿಯಲ್ಲಿ ಇಟ್ಟು ಇಬ್ಬರು ಪೊಲೀಸ್ ಸಿಬ್ಬಂದಿಯನ್ನ ಬಂದೋಬಸ್ತ್ ಗೆ ಹಾಕಬೇಕಾಗಿದೆ. ಸಾಲದಕ್ಕೆ ಆ ನಾಲ್ವರನ್ನ ಬಂಧಿಸಿದ ಸುಮಾರು ಎಂಟಕ್ಕೂ ಅಧಿಕ ಪೊಲೀಸರು ಕೂಡ ಕ್ವಾರಂಟೈನ್ ಗೆ ಒಳಗಾಗಬೇಕಿದೆ. ಗಾಂಜಾ ಸಾಗಿಸುತ್ತಿದ್ದ ನಾಲ್ವರನ್ನು ಮಾಹಿತಿ ಕಲೆಹಾಕಿ ಬಂಧಿಸಿದ ಪೊಲೀಸರಿಗೆ ಅರೆಸ್ಟ್ ಮಾಡಿದ ಮೇಲೂ ಕೋವಿಡ್ ಆಸ್ಪತ್ರೆಯ ಮುಂಭಾಗ ಪಿಪಿಇ ಕಿಟ್ಟ ಧರಿಸಿ ಅವರನ್ನು ಕಾಯುವಂತ ಸ್ಥಿತಿ ನಿರ್ಮಾಣವಾಗಿರೋದು ನಿಜಕ್ಕೂ ವಿಪರ್ಯಾಸ…

ಸಚಿನ್ ಶೆಟ್ಟಿ ಚಿಕ್ಕಮಗಳೂರು..

RELATED ARTICLES

Related Articles

TRENDING ARTICLES